ಕರ್ನಾಟಕ

karnataka

ETV Bharat / state

ಕೋವಿಡ್​ನಿಂದ ಮೃತಪಟ್ಟ ರೈತರ 1 ಲಕ್ಷ ರೂ. ಸಾಲ ಮನ್ನಾ: ಎಸ್​​.ಟಿ ಸೋಮಶೇಖರ್ - 1 ಲಕ್ಷ ರೂ. ಸಾಲ ಮನ್ನಾ

ಕೊರೊನಾ ವೈರಸ್​ನಿಂದ ಸಾವನ್ನಪ್ಪಿರುವ ರೈತರ 1 ಲಕ್ಷ ರೂ. ಸಾಲ ಮನ್ನಾ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಸಹಕಾರ ಸಚಿವ ಎಸ್​.ಟಿ ಸೋಮಶೇಖರ್ ತಿಳಿಸಿದ್ದಾರೆ.

ST Somashekhar
ST Somashekhar

By

Published : Jul 15, 2021, 5:45 AM IST

ಮಂಗಳೂರು:ಮಹಾಮಾರಿ ಕೊರೊನಾ ವೈರಸ್​ನಿಂದ ಸಾವನ್ನಪ್ಪಿರುವ ರೈತರ ಸಾಲದಲ್ಲಿನ 1 ಲಕ್ಷ ರೂಪಾಯಿ ಮನ್ನಾ ಮಾಡಲಾಗುವುದು ಎಂದು ಸಹಕಾರ ಸಚಿವ ಎಸ್​.ಟಿ ಸೋಮಶೇಖರ್​ ಹೇಳಿದ್ದಾರೆ.

ಕೋವಿಡ್​ನಿಂದ ರಾಜ್ಯದಲ್ಲಿ 10,187 ರೈತರು ಮೃತಪಟ್ಟಿದ್ದು, ಅವರ 79, 47 ಕೋಟಿ ರೂಪಾಯಿ ಸಾಲ ಮನ್ನಾ ಮಾಡಲು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಚಿಂತನೆ ನಡೆಸಿದ್ದು, ಮುಂದಿನ 3-4 ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಅಪೆಕ್ಸ್​, ಡಿಸಿಸಿ ಬ್ಯಾಂಕ್​ & ಪ್ಯಾಕ್ಸ್​ಗಳಲ್ಲಿ ಸಾಲ ಪಡೆದ ರೈತರಿಗೆ ಇದು ಅನ್ವಯವಾಗಲಿದೆ ಎಂದಿದ್ದಾರೆ. ಬ್ಯಾಂಕ್​ಗಳ ಎಂಡಿಗಳೊಂದಿಗೆ ಸದ್ಯದಲ್ಲೇ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದರು.

ಮಂಗಳೂರಿನಲ್ಲಿ ಮಾತನಾಡಿರುವ ಸಚಿವರು, ಕೋವಿಡ್​ನಿಂದ ಮೃತಪಟ್ಟಿರುವ ಸಾಲಮನ್ನಾಗೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು, ಸಾಲದ ಮೊತ್ತದ 1 ಲಕ್ಷ ರೂಪಾಯಿ ಮನ್ನಾ ಮಾಡಲು ನಿರ್ಧಾರ ಮಾಡಿದೆ ಎಂದಿದ್ದಾರೆ.

ಇದನ್ನೂ ಓದಿರಿ: ಸಿನಿಮಾದಲ್ಲಿ 'ಸೋನು ಸೂದ್'​ಗೆ ಹೊಡೆದಿದ್ದಕ್ಕೆ ಸಿಟ್ಟು... ಮನೆಯ ಟಿವಿ ಒಡೆದು ಹಾಕಿದ ವಿರಾಟ್​!

ಬಿಪಿಎಲ್ ಕಾರ್ಡ್ ಹೊಂದಿರುವ ಕೋವಿಡ್​ನಿಂದ ಮೃತಪಟ್ಟ ವಯಸ್ಕರ ಕುಟುಂಬಕ್ಕೆ 1 ಲಕ್ಷ ರೂ. ನೀಡಲಾಗುವುದು ಎಂದು ಈಗಾಗಲೇ ರಾಜ್ಯ ಸರ್ಕಾರ ಮಹತ್ವದ ಘೋಷಣೆ ಹೊರಡಿಸಿದೆ.

ABOUT THE AUTHOR

...view details