ಚಿತ್ರದುರ್ಗ:ಕುಡಿಯುವ ನೀರಿಲ್ಲ ಎಂದು ಸಾಮಾನ್ಯ ಸಭೆಗಳಲ್ಲಿ ಕೇಕೆ ಹಾಕುತ್ತಿದ್ದ ಜಿಪಂ ಅಧ್ಯಕ್ಷರು, ಸದಸ್ಯರು ಸದ್ಯ ರಿಲ್ಯಾಕ್ಸ್ ಮೂಡ್ಗೆ ಜಾರಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆ ಬಂದು ನೆರೆ ಸೃಷ್ಟಿಯಾದ ಬೆನ್ನಲ್ಲೇ ಗ್ರಾಮೀಣ ಭಾಗದಲ್ಲಿ ಸಮೃದ್ಧಿಯಾದ ಜೀವಜಲ ದೊರೆಯುತ್ತಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಕೂಡಾ ದೂರವಾಗಿದೆ.
ಪ್ರವಾಸದಲ್ಲಿ ಚಿತ್ರದುರ್ಗ ಜಿಪಂ ಅಧ್ಯಕ್ಷರು, ಸದಸ್ಯರು ಇನ್ನು ಜಿಪಂ ಸದಸ್ಯರು ಸರ್ಕಾರದ ಹಣಕ್ಕೆ ಕಾಯದೇ ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿಕೊಂಡು ಕುಟುಂಬ ಸಮೇತ ಈಶಾನ್ಯ ರಾಜ್ಯಗಳಿಗೆ ಪ್ರವಾಸ ಕೈಗೊಂಡಿದ್ದೇವೆ ಎಂದು ಬಿಂಬಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಪ್ರವಾಸದ ಭಾರ ಹೊತ್ತು, ಅದರ ಸಂಪೂರ್ಣವಾದ ವೆಚ್ಚ ನಾವೇ ಭರಿಸಬೇಕೆಂದು ಪ್ರವಾಸದ ಭಾರ ಹೊತ್ತ ನಿರ್ಮಾಣ ಕೇಂದ್ರವೊಂದರ ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಬೇಸರ ಹೊರಹಾಕಿದ್ದಾರೆ.
ಪ್ರವಾಸದಲ್ಲಿ ಚಿತ್ರದುರ್ಗ ಜಿಪಂ ಅಧ್ಯಕ್ಷರು, ಸದಸ್ಯರು ಎರಡು ದಿನದ ಹಿಂದೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ ಪ್ರವಾಸ ಆರಂಭ ಮಾಡಿರುವ ಇವರು, ಈಶಾನ್ಯ ರಾಜ್ಯಗಳಲ್ಲಿ ಯಾವ ಸ್ಥಳಕ್ಕೆ ತೆರಳಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ಇದು ಸರ್ವಪಕ್ಷಗಳ ಸದಸ್ಯರ ಪ್ರವಾಸವಾಗಿದ್ದು, 35 ಜನ ಸದಸ್ಯರ ಪೈಕಿ 24 ಜನ ಸದಸ್ಯರು ಪ್ರವಾಸದಲ್ಲಿ ಭಾಗಿಯಾಗಿದ್ದಾರೆ. ಇನ್ನುಳಿದವರು ತಮ್ಮ ಕ್ಷೇತ್ರಗಳಲ್ಲಿದ್ದಾರೆ. ಜಿಪಂ ಅಧ್ಯಕ್ಷರು ಹಾಗೂ ಸದಸ್ಯರ ಪ್ರವಾಸಕ್ಕಾಗಿ ಮುಖ್ಯ ಯೋಜನಾಧಿಕಾರಿ ಶಶಿಧರ್, ಉಪ ಕಾರ್ಯದರ್ಶಿ ಮೊಹಮ್ಮದ್ ಮುಬೀನ್ ಎಂಬುವರು ರೂಪರೇಷೆ ಸಿದ್ಧಪಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಈ ಅಧಿಕಾರಿಗಳಿಬ್ಬರು ವೈಯಕ್ತಿಕ ರಜೆ ಮೇಲೆ ತೆರಳುತ್ತೇವೆಂದು ಸದಸ್ಯರೊಂದಿಗೆ ಪ್ರವಾಸಕ್ಕೆ ತೆರಳಿರುವುದು ಜಿಪಂ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಸತ್ಯಭಾಮ ಅವರನ್ನು ಕೆರಳಿಸುವಂತೆ ಮಾಡಿದೆ.
ಪ್ರವಾಸದಲ್ಲಿ ಚಿತ್ರದುರ್ಗ ಜಿಪಂ ಅಧ್ಯಕ್ಷರು, ಸದಸ್ಯರು