ಚಿತ್ರದುರ್ಗ: ಕೊರೊನಾ ಲಸಿಕೆ ಬೇಡವೇ ಬೇಡ ಎಂದು ಯುವಕನೋರ್ವ ಮನೆ ಮೇಲೆ ಏರಿ ಕುಳಿತ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಚಳ್ಳಕೆರೆ ತಾಲೂಕಿನ ಎನ್.ದೇವರಹಳ್ಳಿಯ ಮಂಜುನಾಥ್ ಎಂಬಾತ ಲಸಿಕೆ ಬೇಡವೆಂದು ಮನೆ ಏರಿ ಕುಳಿತ ಯುವಕನಾಗಿದ್ದಾನೆ.
ಲಸಿಕೆ ಬೇಡವೆಂದು ಮನೆ ಏರಿ ಕುಳಿತ ಯುವಕ ಲಸಿಕೆ ಬೇಡವೆಂದು ಮನೆ ಮೇಲೆ ಕಳಿತಿದ್ದ ಯುವಕನನ್ನು ಚಳ್ಳಕೆರೆ ತಾಲೂಕು ತಹಶೀಲ್ದಾರ್ ಎನ್.ರಘುಮೂರ್ತಿ, ಮನವೊಲಿಸಿ ಲಸಿಕೆ ಹಾಕಿಸಿದ್ದಾರೆ. ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಭೀತಿಗೆ ಕಾರಣವಾಗಿದೆ. ಆದರೆ, ಕೊರೊನಾ ತೀವ್ರತೆ ಈ ಬಾರಿ ಕಡಿಮೆ ಇದೆ. ಹೀಗಾಗಿ, ಸರ್ಕಾರ ಸದ್ಯ ಲಾಕ್‌ಡೌನ್ ಜಾರಿಗೊಳಿಸಿಲ್ಲ.
ಕೊರೊನಾ ವಿರುದ್ಧ ಹೋರಾಡಲು ಏಕೈಕ ಅಸ್ತ್ರವೆಂದರೆ ಅದು ಲಸಿಕೆ. ಹೀಗಿದ್ದೂ, ಕೆಲವರು ಮಾತ್ರ ವ್ಯಾಕ್ಸಿನ್ ಪಡೆಯಲು ನಿರಾಕರಿಸುತ್ತಿದ್ದಾರೆ. ಅಧಿಕಾರಿಗಳು ಮನೆ ಬಾಗಿಲಿಗೆ ಹೋಗಿ ಲಸಿಕೆ ನೀಡುತ್ತಿದ್ದರೂ, ರಾಜ್ಯದ ಹಲವೆಡೆ ಜನರು ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ. ಲಸಿಕೆ ಬೇಡವೇ ಬೇಡ ಎಂದು ಕಾಲ್ಕಿತ್ತು ಓಡುತ್ತಿದ್ದು, ಅಧಿಕಾರಿಗಳು ಜಾಗೃತಿ ಮೂಡಿಸಿ ಲಸಿಕೆ ಹಾಕುತ್ತಿದ್ದಾರೆ.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ