ಚಿತ್ರದುರ್ಗ: ಭೋವಿ ಸಮುದಾಯಕ್ಕೆ ಟಿಕೆಟ್ ತಪ್ಪಿಸಿದ್ದರಿಂದ ಭೋವಿ ಸಮಾಜದ ಮುಖಂಡರು ಗರಂ ಆಗಿದ್ದಾರೆ. ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿಯವರ ಮನವೋಲಿಸಲು ಭೋವಿ ಗುರುಪೀಠಕ್ಕೆ ಭೇಟಿ ನೀಡಿದ ಬಿಎಸ್ವೈಗೆ, ಯಡಿಯೂರಪ್ಪ ಮಠಕ್ಕೆ ಬರಬಾರದು ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭೋವಿ ಮಠಕ್ಕೆ ಭೇಟಿ ನೀಡಿದ ಯಡಿಯೂರಪ್ಪ ವಿರುದ್ಧ ಭಕ್ತರ ಆಕ್ರೋಶ - undefined
ಇಂದು ಭೋವಿ ಗುರುಪೀಠಕ್ಕೆ ಭೇಟಿ ನೀಡಿದ ಬಿಎಸ್ವೈ ವಿರುದ್ಧ ಭೋವಿ ಸಮುದಾಯದ ಮುಖಂಡರು ಮಠದ ಬಳಿ ಧಿಕ್ಕಾರ ಕೂಗಿದರು.

ಯಡಿಯೂರಪ್ಪ ವಿರುದ್ಧ ಭಕ್ತರ ಆಕ್ರೋಶ
ನಮ್ಮ ಸುಮದಾಯಕ್ಕೆ ಯಡಿಯೂರಪ್ಪ ಮೋಸ ಮಾಡಿದ್ದಾರೆ ಎಂದು ಕೆಂಡಾಮಂಡಲರಾದ ಭೋವಿ ಸಮುದಾಯದ ಮುಖಂಡರು, ಮಠದ ಬಳಿ ಯಡಿಯೂರಪ್ಪ ವಿರುದ್ಧ ದಿಕ್ಕಾರ ಕೂಗಿದರು. ಈ ಬಾರಿ ಶಿವಮೊಗ್ಗದಲ್ಲಿ ನಿಮ್ಮ ಮಗ ರಾಘವೇಂದ್ರ ಅವರನ್ನು ಸೋಲಿಸುತ್ತೇವೆ ಎಂದು ಆಕ್ರೋಶ ಹೊರ ಹಾಕಿದರು.
ಯಡಿಯೂರಪ್ಪ ವಿರುದ್ಧ ಭಕ್ತರ ಆಕ್ರೋಶ
ಅಲ್ಲದೆ ನಾರಾಯಣ ಸ್ವಾಮಿ ಬಳಿ ಹಣ ಪಡೆದು ಟಿಕೆಟ್ ನೀಡಿದ್ದಾರೆ ಎಂದು ಆರೋಪಿಸಿದರು. ಇನ್ನು ಭೋವಿ ಸಮುದಾಯದವರು ನಮಗೆ ಮತವನ್ನು ನೀಡಿಲ್ಲ ಎಂದು ಹೇಳಿಕೆ ನೀಡಿದ್ದ ಚಿತ್ರದುರ್ಗ ಬಿಜೆಪಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿಗೆ ಮಠದ ಕೆಲ ಭಕ್ತರು ತರಾಟೆಗೆ ತೆಗೆದುಕೊಂಡರು.