ಚಿತ್ರದುರ್ಗ:ಅನಾಮಧೇಯ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಕಾದಂಬರಿಕಾರ ಬಿ.ಎಲ್.ವೇಣು ನಗರದ ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಕ್ಷಮೆ ಕೇಳಬೇಕು. 61 ಸಾಹಿತಿಗಳಿಗೂ ಬುದ್ದಿ ಹೇಳಿ ಎಂದೆಲ್ಲ ಪತ್ರದಲ್ಲಿ ಪ್ರಸ್ತಾಪಿಸಲಾಗಿತ್ತು.
ಈ ಪತ್ರ ಬರೆದವರ ವಿರುದ್ಧ ಕ್ರಮಕ್ಕೆ ಬಿ.ಎಲ್.ವೇಣು ಆಗ್ರಹಿಸಿದ್ದಾರೆ. ಐಪಿಸಿ ಸೆಕ್ಷನ್ 504, 507ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಂಚೆ ಮೂಲಕ ವೇಣು ಅವರ ನಗರದ ಮುನ್ಸಿಪಲ್ ಕಾಲೋನಿ ನಿವಾಸಕ್ಕೆ ಪತ್ರ ರವಾನಿಸಲಾಗಿತ್ತು. ಈ ಹಿಂದೆ ಜೂನ್ 22ರಂದು ಸಹ ಅನಾಮಧೇಯ ವ್ಯಕ್ತಿಗಳು ಬೆದರಿಕೆ ಪತ್ರ ರವಾನಿಸಿದ್ದರು.