ಕರ್ನಾಟಕ

karnataka

ETV Bharat / state

ಕಾರ್ಮಿಕರ ವಜಾ ಅಥವಾ ವೇತನ ಕಡಿತ ಮಾಡುವಂತಿಲ್ಲ: ಡಿಸಿ ವಿನೋತ್ ಪ್ರಿಯಾ ಸೂಚನೆ - ಜಿಲ್ಲಾಧಿಕಾರಿ ವಿನೋತ್​ ಪ್ರಿಯಾ

21 ದಿನಗಳ ಕಾಲ ಲಾಕ್​ಡೌನ್​ ಆದೇಶ ಹೊರಡಿಸಿರುವ ಪರಿಣಾಮ ದೇಶಾದ್ಯಂತ ಬಂದ್​ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಆಡಳಿತ ವರ್ಗ, ಕಂಪನಿಗಳು ಯಾವುದೇ ಕಾರಣಕ್ಕೂ ಕೆಲಸದಿಂದ ನೌಕರರನ್ನು ವಜಾಗೊಳಿಸಬಾರದು ಎಂದು ಜಿಲ್ಲಾಧಿಕಾರಿ ಆಯಾ ಕಂಪನಿಗಳಿಗೆ ಸೂಚನೆ ನೀಡಿದ್ದಾರೆ.

District collector
ಜಿಲ್ಲಾಧಿಕಾರಿ ವಿನೋತ್​ ಪ್ರಿಯಾ

By

Published : Mar 27, 2020, 6:50 PM IST

ಚಿತ್ರದುರ್ಗ:ಕಾರ್ಮಿಕ ಇಲಾಖೆಯ ಸೂಚನೆಯಂತೆ ಯಾವುದೇ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಬಾರದು ಹಾಗೂ ವೇತನ ಕಡಿತಗೊಳಿಸಬಾರದು ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಅವರು ಜಿಲ್ಲೆಯ ಎಲ್ಲ ಸಂಸ್ಥೆಗಳು, ಕಾರ್ಖಾನೆಗಳ ಮಾಲೀಕರು, ಆಡಳಿತ ವರ್ಗದವರಿಗೆ ಸೂಚಿಸಿದರು.

ಕೊರೊನಾ ವೈರಸ್​ ಸಮಾಜಕ್ಕೆ ಒಂದು ಸವಾಲಾಗಿ ಪರಿಣಮಿಸಿದೆ. ಸೋಂಕು ತಡೆಗಟ್ಟುವ ದೃಷ್ಟಿಯಿಂದ ಎಲ್ಲರೂ ಮನೆಯಲ್ಲಿ ಇರಬೇಕು. ಹೊರ ಹೋಗದಂತೆ ಲಾಕ್​ಡೌನ್​ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಸಂಪೂರ್ಣ ಬಂದ್ ಘೋಷಣೆಯಾಗಿದೆ.

ಈ ನೆಪದಲ್ಲಿ ಆಡಳಿತ ವರ್ಗದವರು, ಮಾಲೀಕರು ಕಾರ್ಮಿಕರನ್ನು ವಜಾ ಮಾಡಬಹುದು ಅಥವಾ ವೇತನವಿಲ್ಲದೇ ರಜೆ ಮೇಲೆ ಹೋಗುವಂತೆ ಒತ್ತಾಯಿಸುವಂತಹ ಘಟನೆಗಳು ಜರುಗುವ ಸಾಧ್ಯತೆ ಇದೆ. ಇಂತಹ ಸನ್ನಿವೇಶದಲ್ಲಿ ಮಾಲೀಕರು ಕೆಲಸಗಾರರನ್ನು ಅಥವಾ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಬಾರದು. ವೇತನ ಕಡಿತಗೊಳಿಸಬಾರದು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ABOUT THE AUTHOR

...view details