ಚಿತ್ರದುರ್ಗ: ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ನ ಪ್ರಧಾನ ಕಚೇರಿ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಚಿತ್ರದುರ್ಗ ಜಿಪಂ ಸಿಇಒ ಸಿ.ಸತ್ಯಭಾಮ ಉಧ್ಘಾಟಿಸಿದರು.
ಮಹಿಳಾ ದಿನಾಚರಣೆ: ಜಿಪಂ ನೂತನ ಸಿಇಒ ಸತ್ಯಭಾಮ ಭಾಗಿ - ಚಿತ್ರದುರ್ಗ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಚಿತ್ರದುರ್ಗ ಜಿಪಂ ನೂತನ ಸಿಇಒ ಸಿ.ಸತ್ಯಭಾಮ ಉಧ್ಘಾಟಿಸಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಚಿತ್ರದುರ್ಗ ಜಿಪಂ ನೂತನ ಸಿಇಒ ಸಿ.ಸತ್ಯಭಾಮ ಉಧ್ಘಾಟಿಸಿದರು.
ನಂತರ ಪ್ರತಿಭಾವಂತ ವಿದ್ಯಾರ್ಥಿನಿ ಹಾಗೂ ಬಿಎಸ್ಸಿಯಲ್ಲಿ ಚಿನ್ನದ ಪದಕ ಪಡೆದಿರುವ ಅಮೃತಲಕ್ಷ್ಮಿ ಎಂ.ಆರ್.ರನ್ನ ಸನ್ಮಾನಿಸಲಾಯಿತು. ನಂತರ ಮಾತನಾಡಿದ ಸಿಇಒ, ಮಹಿಳೆಯರು ಮುಖ್ಯ ವಾಹಿನಿಗೆ ಬರಬೇಕು. ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ಮುಂಚುಣಿಯಲ್ಲಿರಬೇಕು ಎಂದರು.
ಈ ಸಂದರ್ಭದಲ್ಲಿ ಡಾ. ವಿ ಲತಾ, ಪ್ರೊ. ತಾರಿಣಿ ಶುಭದಾಯಿನಿ, ಮಾಲಿನಿ, ಪ್ರಾಧ್ಯಾಪಕರಾದ ಡಾ. ಎನ್.ಬಿ.ಗಟ್ಟಿ ಮತ್ತು ಬ್ಯಾಂಕ್ನ ಮುಖ್ಯಸ್ಥ ಜಿ.ಆರ್.ಮಂಜುನಾಥ್ ಮತ್ತು ಜಿಲ್ಲೆಯ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ನ ಅಧಿಕಾರಿ ವರ್ಗದವರು ಇದ್ದರು.