ಕರ್ನಾಟಕ

karnataka

ETV Bharat / state

ಚಿತ್ರದುರ್ಗದಲ್ಲಿ ಮಹಿಳೆ ಆತ್ಮಹತ್ಯೆ: ಪೋಷಕರಿಂದ ವರದಕ್ಷಿಣೆ ಕಿರುಕುಳ ಆರೋಪ - chitradurga crime enws

ಗಂಡನ ಮನೆಯವರು ಪದೇ ಪದೇ ಗಲಾಟೆ ಮಾಡುತ್ತಿದ್ದರಂತೆ. ಈ ಹಿನ್ನೆಲೆಯಲ್ಲಿ ಎರಡು ಕುಟುಂಬದವರು ಸಾಕಷ್ಟು ಬಾರಿ ರಾಜಿ ಪಂಚಾಯಿತಿಗಳನ್ನೂ ಮಾಡಿದ್ದರಂತೆ. ಇದರಿಂದ ಮನನೊಂದ ಮಹಿಳೆ ಸಾವಿಗೀಡಾಗಿದ್ದು, ಪೋಷಕರು ಇದು ಕೊಲೆ ಎಂದು ಆರೋಪ ಮಾಡಿದ್ದಾರೆ.

Woman commits suicide in chitradurga
ಪೋಷಕರಿಂದ ವರದಕ್ಷಿಣೆ ಕಿರುಕುಳ ಆರೋಪ

By

Published : Jul 23, 2021, 5:30 PM IST

ಚಿತ್ರದುರ್ಗ: ಮಹಿಳೆಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ಸೂಜಿಮಲ್ಲೇಶ್ವರ ನಗರದಲ್ಲಿ ನಡೆದಿದೆ.

ಅನಿತಾ (23) ಮೃತಳು. ಮಂಜುನಾಥ್ ಎಂಬುವರೊಂದಿಗೆ ಚಿತ್ರದುರ್ಗ ತಾಲ್ಲೂಕಿನ ಚಿಕ್ಕಗೊಂಡನಹಳ್ಳಿಗೆ ಅನಿತಾ ಅವರನ್ನು 2016 ರಲ್ಲಿ ಮದುವೆ ಮಾಡಿಕೊಡಲಾಗಿತ್ತು. ಗಂಡನ ಮನೆಯವರು ಗಲಾಟೆ ಮಾಡುತ್ತಿದ್ದರಂತೆ. ಈ ಹಿನ್ನೆಲೆಯಲ್ಲಿ ಎರಡು ಕುಟುಂಬದವರು ಸಾಕಷ್ಟು ಬಾರಿ ರಾಜಿ ಪಂಚಾಯಿತಿಗಳನ್ನೂ ಮಾಡಿದ್ದರಂತೆ.

ಇನ್ನು ಗಂಡ ಮಂಜುನಾಥ್, ಈತನ ತಂದೆ ತಿಪ್ಪೇಸ್ವಾಮಿ, ತಾಯಿ ತಿಪಮ್ಮ, ಮಂಜುನಾಥ್ ಸಹೋದರ ಲೋಕೇಶ್ ಮೇಲೆ ಮೃತ ಅನಿತಾ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಚಳ್ಳಕೆರೆ ತಾಲೂಕಿನ ದಂಡಾಧಿಕಾರಿ ರಘುಮೂರ್ತಿ, ಚಳ್ಳಕೆರೆ ನಗರ ಪೊಲೀಸ್ ಠಾಣೆ ಸಿಪಿಐ ತಿಪ್ಪೇಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details