ಚಿತ್ರದುರ್ಗ: ಭಾರತೀಯ ಸೈನ್ಯದಿಂದ ನಿವೃತ್ತಿ ಹೊಂದಿ ತಮ್ಮ ಊರಿಗೆ ಮರಳಿದ ಸೈನಿಕನಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದ್ದಾರೆ.
ಸೈನ್ಯದಿಂದ ನಿವೃತ್ತಿ ಹೊಂದಿ ಊರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ.. - soldier
ಭಾರತೀಯ ಸೈನ್ಯದಿಂದ ನಿವೃತ್ತಿ ಹೊಂದಿ ತಮ್ಮ ಊರಿಗೆ ಮರಳಿದ ಸೈನಿಕನಿಗೆ ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದ್ದಾರೆ.
ಭಾರತೀಯ ಸೈನ್ಯದಲ್ಲಿ 18 ವರ್ಷಗಳ ಕಾಲ ಸುದೀರ್ಘ ಕಾಲ ಸೇವೆ ಸಲ್ಲಿದ ಸೈನಿಕ ಬೋರರಾಜ್ಗೆ ಚಳ್ಳಕೆರೆ ತಾಲೂಕಿನ ಜನರು ಪುಷ್ಪ ಮಾಲೆ ಹಾಕುವ ಮೂಲಕ ಅದ್ಧೂರಿ ಸ್ವಾಗತ ಕೋರಿದರು. ಬೋರರಾಜ್ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯವರು. ಇವರು ಭಾರತೀಯ ಸೈನ್ಯದಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಹೊಂದಿ ಊರಿಗೆ ಮರಳಿದ್ದಾರೆ.
ಯೋಧನಿಗೆ ಚಳ್ಳಕೆರೆಯ ಅಂಬೇಡ್ಕರ್ ಸೇನೆ ಮತ್ತು ಸಾರ್ವಜನಿಕರು ಮೈಸೂರು ಪೇಟ, ಶಾಲು ಹೊದಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಯುವಕರು ಕೂಡ ಪಟಾಕಿ ಸಿಡಿಸಿ ಸಂಭ್ರಮಿಸಿದ್ದು, ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳನ್ನು ಭಾರತೀಯ ಸೈನ್ಯಕ್ಕೆ ಸೇರಿಸಿ ಎಂದು ಜನರಲ್ಲಿ ನಿವೃತ್ತ ಯೋಧ ಇದೇ ವೇಳೆ ಮನವಿ ಮಾಡಿದರು.