ಚಿತ್ರದುರ್ಗ:ಕೊರೊನಾ ಸೋಂಕಿತರನ್ನು ನೆರೆಹೊರೆಯವರು ಕೀಳಾಗಿ ನೋಡುತ್ತಿರುವ ಘಟನೆಗಳಿಗೆ ಚಿತ್ರದುರ್ಗ ಜಿಲ್ಲೆ ಸಾಕ್ಷಿಯಾಗಿದೆ. ಹೌದು, ಜಿಲ್ಲೆಯಲ್ಲಿ ದಿನೇ ದಿನೆ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸೋಂಕಿತರನ್ನು ಕೀಳಾಗಿ ನೋಡುವ ಮನೋಭಾವಕ್ಕೆ ಪುಷ್ಠಿ ಸಿಕ್ಕಿದಂತಾಗಿದೆ.
ಅರೋಗ್ಯ ಇಲಾಖೆ ಕೂಡ ಜನರಲ್ಲಿ ಜಾಗೃತಿ ಮೂಡಿಸುತ್ತಿದೆಯಾದರೂ ಯಾವುದೇ ಪ್ರಯೋಜನ ಆಗಿಲ್ಲ. ಪಾಸಿಟಿವ್ ಪ್ರಕರಣಗಳು 7 ಸಾವಿರ ಗಡಿ ದಾಟಿದೆ. ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸೋಂಕಿತರ ಜೊತೆ ಅಕ್ಕಪಕ್ಕದ ಮನೆ ಹಾಗೂ ನೆರೆಹೊರೆಯವರು ಕೀಳಾಗಿ ನಡೆದುಕೊಳ್ಳುತ್ತಿರುವ ಅಮಾನವೀಯ ಘಟನೆ ದಿನನಿತ್ಯ ನಡೆಯುತ್ತಿವೆ ಎನ್ನುವ ಆರೋಪಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಕೊರೊನಾ ಪಾಸಿಟಿವ್ ಸೋಂಕಿತರನ್ನು ಕೀಳಾಗಿ ನೋಡುವ ಮನಸ್ಥಿತಿ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿರುವುದರಿಂದ ಗುಣಮುಖರಾಗಿ ಮನೆಗೆ ತೆರಳುವ ರೋಗಿಗಳಿಗೆ ಕಸಿವಿಸಿಯಾಗುತ್ತಿದೆ.
ಸೋಂಕಿತರನ್ನು ಕೀಳಾಗಿ ಕಾಣಬೇಡಿ ಕೊರೊನಾದಿಂದ ವಾಸಿಯಾಗಿ ಬಂದಿರುವ ಅದೆಷ್ಟೋ ಜನ ಮನೆಯಲ್ಲೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣ ಆಗಿದೆಯಂತೆ. ಇನ್ನು ಸೋಂಕಿನಿಂದ ಗುಣಮುಖರಾಗಿ ಬಂದವರ ಮನೆಯ ಎದುರು ಜನಸಾಮಾನ್ಯರು ಮುಖ ಮುಚ್ಚಿಕೊಂಡು ಹೋಗುವುದು, ಮಾತನಾಡದೆ ಇರುವುದು, ಕೀಳಾಗಿ ನಡೆದುಕೊಳ್ಳುವ ಪರಿಸ್ಥಿತಿ ತಲೆದೋರಿರುವುದರಿಂದ ಗುಣಮುಖರಾದ ಅದೆಷ್ಟೋ ಮಂದಿ ಮನೆಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕೀಳಾಗಿ ನಡೆದುಕೊಳ್ಳುವಂತಹ ಜನರಲ್ಲಿ ಜಾಗೃತಿ ಮೂಡಿಸಲಾಗಿದ್ದು, ಸಾಕಷ್ಟು ತಿಳಿಹೇಳಲಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಲಾಕ್ಷಪ್ಪ.
ಇನ್ನು ಈ ರೀತಿ ಕೀಳಾಗಿ ನಡೆದುಕೊಳ್ಳುತ್ತಿರುವ ಜನರನ್ನು ಗಮನಿಸಿರುವ ಸಾಮಾಜಿಕ ಹೋರಾಟಗಾರ ಶಫೀವುಲ್ಲಾ ಮರುಗಿದ್ದಾರೆ. ಕೀಳಾಗಿ ನಡೆದುಕೊಳ್ಳುವ ಜನಕ್ಕೆ ಮುಂದಿನ ದಿನಗಳಲ್ಲಿ ಕೊರೊನಾ ಬರಬಹುದು. ಆಗ ಏನು ಮಾಡ್ತೀರಾ ಎಂದು ಜನಸಾಮಾನ್ಯರಿಗೆ ಪ್ರಶ್ನೆ ಮಾಡಿದ್ದಾರೆ. ಈಗಾಗಲೇ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಈ ಘಟನೆಗಳು ಮರುಕಳಿಸುತ್ತಿದ್ದು, ಸಂಬಂಧಪಟ್ಟ ಇಲಾಖೆಯವರು ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಎದುರಗಾಗಿದೆ ಎಂದರು.