ಚಿತ್ರದುರ್ಗ: ನಮ್ಮ ತ್ಯಾಗ ಸಾರ್ಥಕವಾಗಿದೆ, ಬಿ.ಎಸ್. ಯಡಿಯೂರಪ್ಪನವರು ಸಿಎಂ ಆಗಿದ್ದಾರೆ. ನಾನು ಈಗ ಮಾಜಿ ಶಾಸಕ ಆಗಿದ್ದೇನೆ, ಮಾಜಿ ಸಿಎಂ ಈಗ ಹಾಲಿ ಸಿಎಂ ಆಗಿದ್ದಾರೆ. ಯಡಿಯೂರಪ್ಪ ಸಿಎಂ ಆಗಬೇಕು ಅಂತ 17 ಶಾಸಕರು ತ್ಯಾಗ ಮಾಡಿದ್ದೇವೆ, ರಾಜ್ಯಕ್ಕೆ ಬಿಎಸ್ವೈ ನೇತೃತ್ವದ ಸುಭದ್ರ ಸರ್ಕಾರ ನೀಡಿದ ಸಾರ್ಥಕ ಭಾವ ನಮ್ಮಲ್ಲಿದೆ ಎಂದು ಹಿರೇಕೆರೂರು ಕ್ಷೇತ್ರದ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಸಿಎಂ ಬಿಎಸ್ವೈ ಅವರನ್ನು ಕೊಂಡಾಡಿದರು.
ಸುಭದ್ರ ಸರ್ಕಾರ ನೀಡಿದ ಸಾರ್ಥಕ ಭಾವ ಅನರ್ಹರ ಶಾಸಕರಿಗಿದೆ: ಬಿ.ಸಿ. ಪಾಟೀಲ್ - secure government for the state
ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಚಾರ್ಯ ಶ್ರೀಯವರ 27ನೇ ಶ್ರದ್ಧಾಂಜಲಿ ಸಮಾರಂಭವನ್ನುದ್ದೇಶಿ ಮಾತನಾಡಿದ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಅವರು, ನಾನು ಈಗ ಮಾಜಿ ಶಾಸಕ ಆಗಿದ್ದೇನೆ, ಮಾಜಿ ಸಿಎಂ ಈಗ ಹಾಲಿ ಸಿಎಂ ಆಗಿದ್ದಾರೆ. ಯಡಿಯೂರಪ್ಪ ಸಿಎಂ ಆಗಬೇಕು ಅಂತ 17 ಶಾಸಕರು ತ್ಯಾಗ ಮಾಡಿದ್ದೇವೆ, ರಾಜ್ಯಕ್ಕೆ ಬಿಎಸ್ವೈ ನೇತೃತ್ವದ ಸುಭದ್ರ ಸರ್ಕಾರ ನೀಡಿದ ಸಾರ್ಥಕ ಭಾವ ನಮ್ಮಲ್ಲಿದೆ ಎಂದರು.
ಜಿಲ್ಲೆಯ ಸಿರಿಗೆರೆ ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಚಾರ್ಯ ಶ್ರೀಯವರ 27ನೇ ಶ್ರದ್ಧಾಂಜಲಿ ಸಮಾರಂಭವನ್ನುದ್ದೇಶಿ ಮಾತನಾಡಿದ ಅವರು, ಕಳೆದ ವರ್ಷ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಬಂದಾಗ ನೀವು (ಜನ) ನನ್ನ ಕಾರಿಗೆ ಮುತ್ತಿಗೆ ಹಾಕಿದ್ರಿ. ಕಾರಿಗೆ ಮುತ್ತಿಗೆ ಹಾಕಿ ಬಿಜೆಪಿ ಸೇರ್ಪಡೆ ಆಗುವಂತೆ ಒತ್ತಾಯ ಮಾಡಿದ್ರಿ, ನಿಮ್ಮ ಒತ್ತಾಯದ ಫಲವಾಗಿ ಇಂದು ಬಿಎಸ್ವೈ ಸಿಎಂ ಆಗಿದ್ದಾರೆ. ನಾನು ಬಿಜೆಪಿ ಸೇರ್ಪಡೆ ಆಗ್ತಿನಿ ಅಂತ ಪರೋಕ್ಷವಾಗಿ ಪಾಟೀಲ್ ಹೇಳಿಕೊಂಡರು.
ಇನ್ನೂ ಯಡಿಯೂರಪ್ಪ ಸಿಎಂ ಆದ್ರೆ ರಾಜ್ಯದಲ್ಲಿ ನೆರೆ ಬರತ್ತೆ, ನೆರೆ ಬಂದ್ರೆ ಸ್ವಲ್ಪ ಕಷ್ಟ ಆಗುತ್ತೆ. ಆದರೆ, ಜನ ಚೆನ್ನಾಗಿ ಇರ್ತಾರೆ, ಬೇರೆಯವರು ಸಿಎಂ ಆದ್ರೆ ಇಡೀ ರಾಜ್ಯಕ್ಕೆ ಬರ ವಕ್ಕರಿಸತ್ತೆ ಎಂದು ಮಾಜಿ ಸಿಎಂಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಮಳೆ ಬಂದ್ರೆ ಕೇಡಲ್ಲ, ಮಗ ಉಂಡ್ರೆ ಕೇಡಲ್ಲ ಯಡಿಯೂರಪ್ಪ ಅವರ ಕಾಲ್ಗುಣ ರಾಜ್ಯ ಸುಭೀಕ್ಷವಾಗಿದ್ದು, ನಾನು ಈಗ ಅನರ್ಹ ಆಗಿರಬಹುದು. ಅರ್ಹ ಮಾಡೋ ಶಕ್ತಿ ನಿಮ್ಮಲ್ಲಿದೆ ಎಂದು ಕಾರ್ಯಕ್ರಮದಲ್ಲಿ ನೆರೆದಿದ್ದ ಜನ್ರೀಗೆ ಸಂದೇಶ ರವಾನೆ ಮಾಡಿದ್ರು.