ಚಿತ್ರದುರ್ಗ : ಭದ್ರಾ ಜಲಾಶಯದಿಂದ ಹಿರಿಯೂರಿನ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಿರುವುದು ಸಾರ್ವಜನಿಕರ ಹಾಗೂ ಹೋರಾಟಗಾರರ ಹೋರಾಟಕ್ಕೆ ಸಂದ ಫಲವಾಗಿದೆ ಎಂದು ಮುರುಘಾಮಠದ ಪೀಠಾಧೀಪತಿ ಶ್ರೀ ಶಿವಮೂರ್ತಿ ಸ್ವಾಮೀಜಿ ಹೇಳಿದರು.
ವಾಣಿವಿಲಾಸ ಸಾಗರಕ್ಕೆ ನೀರು ಹರಿಸಿರುವುದು ಹೋರಾಟಕ್ಕೆ ಸಂದ ಜಯ : ಮುರುಘಾ ಶ್ರೀ
ಹಿರಿಯೂರಿನ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಮುರುಘಾ ಶ್ರೀ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
ಮುರುಘಾ ಶ್ರೀ
ಮುರುಘಾಮಠದಲ್ಲಿ ಮಾತನಾಡಿದ ಅವರು, ಈಗಾಗಲೇ ಎರಡು ಟಿಎಂಸಿ ನೀರು ಹರಿಸಲಾಗಿದೆ. ವಿವಿ ಸಾಗರಕ್ಕೆ ನೀರು ಹರಿದು ಬರಲು ಸಮಯಾವಕಾಶ ಬೇಕು. ಜಲಾಶಯದ ನೀರು ಬರಪೀಡಿತ ತಾಲೂಕುಗಳಾದ ಮೊಳಕಾಲ್ಮೂರು, ಜಗಳೂರಿಗೆ ಹರಿಸಲಾಗುತ್ತದೆ. ವಾಣಿವಿಲಾಸ ಸಾಗರಕ್ಕೆ ನೀರು ಹರಿಸಿದ್ದಕ್ಕಾಗಿ ಸರ್ಕಾರಕ್ಕೆ ಅಭಿನಂದನೆ ತಿಳಿಸುತ್ತೇನೆ ಎಂದರು.
ಬರಪೀಡಿತ ಚಿತ್ರದುರ್ಗ ಜಿಲ್ಲೆಯನ್ನು ಸಮಗ್ರ ನೀರಾವರಿ ಜಿಲ್ಲೆಯಾಗಿ ಮಾಡಬೇಕು ಎಂದ ಶ್ರೀಗಳು, ಈಗಾಗಲೇ ಆಗಿರುವ ಯೋಜನೆಗಳಿಗಾಗಿ ಅಭಿನಂದನೆ ಸಲ್ಲಿಸಿದರು. ಇನ್ನು ಆಗಬೇಕಾಗಿರುವ ಯೋಜನೆಗಳಿಗಾಗಿ ಹೋರಾಟ ಮುಂದುವರೆಸುವುದಾಗಿ ತಿಳಿಸಿದರು.