ಚಿತ್ರದುರ್ಗ: ಜಿಲ್ಲೆಯ ಜೀವನಡಿಯಾಗಿರುವ ವಾಣಿ ವಿಲಾಸ ಸಾಗರಕ್ಕೆ ಎರಡನೇ ಬಾರಿ ನೀರು ಹರಿಸಲಾಗಿದೆ. ಭದ್ರಾ ಜಲಾಶಯದಿಂದ 450 ಕ್ಯೂಸೆಕ್ ನೀರು ಹರಿಸಿದ್ದರಿಂದ ವಿವಿ ಜಲಾಶಯದ ನೀರಿನ ಮಟ್ಟ 100 ಅಡಿಗೆ ತಲುಪಿದೆ.
ಈ ಹಿಂದೆ ಜಲಾಶಯದ ನೀರಿನ ಮಟ್ಟ 91 ಅಡಿ ಇದ್ದು, ಕಳೆದೆರಡು ದಿನಗಳ ಹಿಂದೆ ತಾವರೆಕೆರೆ ಪಂಪ್ ಹೌಸ್‌ನಿಂದ ವಿವಿ ಸಾಗರಕ್ಕೆ ಪಂಪ್ ಮಾಡುವ ಮೂಲಕ ಪ್ರತಿದಿನ 450 ಕ್ಯೂಸೆಕ್ ನೀರನ್ನು ಹರಿಸಲಾಗಿದೆ. ಸತತ 57 ಬಾರಿ ವಿವಿ ಜಲಾಶಯ 100 ಅಡಿ ತಲುಪಿದ್ದು, ಇದೀಗ 58 ನೇ ಬಾರಿ 100 ಅಡಿಗೆ ತಲುಪಿದೆ.