ಚಿತ್ರದುರ್ಗ:ಜಿಲ್ಲೆಯ ಬಹು ವರ್ಷಗಳ ಕನಸು ನನಸಾಗುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಕೊನೆಯ ಹಂತ ತಲುಪಿದ್ದು, ಸೆ.04 ಕ್ಕೆ ವಿವಿ ಸಾಗರಕ್ಕೆ ಭದ್ರೆ ಹರಿಯಲಿದ್ದಾಳೆ ಎಂದು ಶಾಸಕ ತಿಪ್ಪಾರೆಡ್ಡಿ ತಿಳಿಸಿದರು.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಶಾಸಕರು, ನೀರು ಹರಿಸುವ ಬಗ್ಗೆ ವಿಶ್ವೇಶ್ವರಯ್ಯ ಜಲ ನಿಗಮದ ಅಭಿಯಂತರರು ಸರ್ಕಾರದ ಅಧಿಕೃತ ಪತ್ರದ ಮೂಲಕ ಶಾಸಕರಿಗೆ ನೀರು ಹರಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. ಸೆ.02 ಕ್ಕೆ ನೀರು ಹರಿಬೇಕಾಗಿತ್ತು. ಅನಿವಾರ್ಯದ ಕಾರಣಗಳಿಂದಾಗಿ ಅದು ಸಾಧ್ಯವಾಗಿಲ್ಲ. ಆದ್ದರಿಂದ ಸೆ.04 ಕ್ಕೆ ಅಧಿಕೃತವಾಗಿ ನೀರು ಹರಿಸಲಾಗುತ್ತಿದೆ.