ಕರ್ನಾಟಕ

karnataka

ETV Bharat / state

ಚಿತ್ರದುರ್ಗದಲ್ಲಿ ಮಳೆ ಆರ್ಭಟ.. ಕೆರೆ ಕಾಲುವೆ ಒಡೆದು‌ ಲಕ್ಷಾಂತರ ಕ್ಯೂಸೆಕ್ ನೀರು‌ ವ್ಯರ್ಥ

ಮುಂದಿನ ದಿನಗಳಲ್ಲಿ ರಾಣಿಕೆರೆ ಕೋಡಿ ಬಿದ್ದರೂ ಅಚ್ಚರಿಯಿಲ್ಲ ಎಂದು ಚಳ್ಳಕೆರೆಯ ಸ್ಥಳೀಯರು ನೀರಾವರಿ ಇಲಾಖೆ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಲುವೆ ಒಡೆದು‌ ಲಕ್ಷಾಂತರ ಕ್ಯೂಸೆಕ್ ನೀರು‌ ವ್ಯರ್ಥ
ಕಾಲುವೆ ಒಡೆದು‌ ಲಕ್ಷಾಂತರ ಕ್ಯೂಸೆಕ್ ನೀರು‌ ವ್ಯರ್ಥ

By

Published : Aug 7, 2022, 6:32 PM IST

ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ವೇದಾವತಿ ನದಿಯಿಂದ ರಾಣಿಕೆರೆಗೆ‌ ಹರಿಯುವ ನೀರಿನ ಕಾಲುವೆ ಒಡೆದು‌ ಲಕ್ಷಾಂತರ ಕ್ಯೂಸೆಕ್ ನೀರು‌ ವ್ಯರ್ಥವಾಗಿದೆ. ತಾಲೂಕಿನ ನಾರಾಯಣಪುರ ಹಾಗೂ ಮೆಟ್ಟಿಲುಗೆರೆ ರಸ್ತೆ ಮೂಲಕ ಹರಿದು ಬರುವ ನೀರು ಬೆಳೆಗೆರೆ ಗ್ರಾಮದ ಮೂಲಕ ರಾಣಿಕೆರೆಗೆ ಹರಿಯುತ್ತದೆ.

ಲಕ್ಷಾಂತರ ಕ್ಯೂಸೆಕ್​ ನೀರು ಹರಿದು ವ್ಯರ್ಥವಾಗುತ್ತಿರುವ ಸ್ಥಳಕ್ಕೆ ಯಾವೊಬ್ಬ ಅಧಿಕಾರಿಯೂ ಸುಳಿದಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ರಾಣಿಕೆ‌ರೆ ಒಂದು ಬಾರಿ ತುಂಬಿದರೆ ಈ ಭಾಗದ ಸಾವಿರಾರು ರೈತರ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ಕೃಷಿಗೆ ಉತ್ತೇಜನ ನೀಡುತ್ತದೆ. ಈಗ ಇಂತಹ ಅಮೂಲ್ಯವಾದ ನೀರನ್ನು ಸಂಗ್ರಹಿಸುವ ರಾಣಿಕೆರೆ ಕಾಲುವೆ ಒಡೆದು ನೀರು ವ್ಯರ್ಥವಾಗುತ್ತಿರುವುದು ಈ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ರಾಣಿಕೆರೆ ತುಂಬಿ ಕೋಡಿಬೀಳಲು ಕೇವಲ ನಾಲ್ಕು ಅಡಿ ಬಾಕಿ ಇದೆಯಂತೆ. ಸ್ಥಳೀಯರ ಅಭಿಪ್ರಾಯದಂತೆ ವೇದಾವತಿ ನೀರು ಹಾಗೂ ಮಳೆಯ ನೀರಿನಿಂದ ಕೆರೆಕಟ್ಟೆಗಳು ತುಂಬಿ ರಾಣಿಕೆರೆಗೆ ನೀರು ಹರಿದು ಬಂದಿದೆ. ರಾಣಿಕೆರೆ ಭವಿಷ್ಯದಲ್ಲಿ ಕೋಡಿ ಬಿದ್ದರೂ ಅಚ್ಚರಿಯಿಲ್ಲ ಎಂದು ಸ್ಥಳೀಯರು ನೀರಾವರಿ ಇಲಾಖೆ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಲುವೆ ಒಡೆದು‌ ಲಕ್ಷಾಂತರ ಕ್ಯೂಸೆಕ್ ನೀರು‌ ವ್ಯರ್ಥ

ಮಳೆಗಾಲದ ಪ್ರಾರಂಭದಲ್ಲಿ ಇಂತಹ ಜಲ‌ಮೂಲಗಳನ್ನು ಸಂರಕ್ಷಣೆ ಮಾಡುವ ಹೊಣೆ ಹೊತ್ತ ಇಲಾಖೆ ಜಾಣ ಕುರುಡುತನಕ್ಕೆ ರೈತರು ಬಲಿಪಶುಗಳಾಗುತ್ತಿದ್ದಾರೆ. ಬಯಲು ಸೀಮೆಗೆ ನೀರು ಎಂಬುದು ಅಮೂಲ್ಯವಾದ ಜೀವ ಜಲ‌. ಅಂತಹ ಜಲವನ್ನು ಉಳಿಸಿಕೊಳ್ಳುವ ಅನಿವಾರ್ಯತೆ ನಮ್ಮದಾಗಿದೆ.

ಕಾಲುವೆ ಹಾಳು ಮಾಡಿರುವ ಸಂಶಯ: ಆದರೆ, ಇಂತಹ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಮ್ಮ ರಾಣಿಕೆರೆಗೆ ಹರಿದು ಬರುವ ನೀರು‌ ಮಧ್ಯದಲ್ಲಿ ವ್ಯರ್ಥವಾದರೆ ಹೇಗೆ?. ಗಟ್ಟಿಮುಟ್ಟಾದ ಈ ಕಾಲುವೆಗೆ ಯಾವುದೇ ಅಪಾಯ ಇರಲಿಲ್ಲ. ಆದರೆ, ಕಾಲುವೆ ಒಡೆದು ನೀರು ವ್ಯರ್ಥವಾಗಿರುವುದರ ಹಿಂದಿನ ಉದ್ದೇಶ ಏನಿದೆ? ಎಂಬುದು ಮನಗಾಣಬೇಕಿದೆ. ಯಾರೋ ಕಿಡಿಗೇಡಿಗಳು ಈ ಕಾಲುವೆಯನ್ನು ಜೆಸಿಬಿಯಿಂದ ಹಾಳು ಮಾಡಿರುವ ಸಂಶಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

ಓದಿ:ಕಾವಾಡಿ- ಮಾವುತರ ಸಮಸ್ಯೆ ಬಗೆಹರಿದಿದೆ: ಸಚಿವ ಉಮೇಶ್ ಕತ್ತಿ

ABOUT THE AUTHOR

...view details