ಚಿತ್ರದುರ್ಗ: ವಾಣಿವಿಲಾಸ ಸಾಗರದಿಂದ ವೇದಾವತಿ ನದಿಗೆ ನೀರು ಹರಿಸಲು ಏಪ್ರಿಲ್ 22ಕ್ಕೆ ದಿನಾಂಕ ನಿಗದಿಯಾಗಿತ್ತು. ಆದರೆ ಇಲ್ಲಿನ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಇಂದು ನೀರು ಹರಿಸದೆ ಜಲಸಂಪನ್ಮೂಲ ಸಚಿವರಿಗಾಗಿ ಕಾಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ವಿವಿ ಸಾಗರದಿಂದ ವೇದಾವತಿ ನದಿಗೆ ನೀರು ಹರಿಸುವ ಕಾರ್ಯಕ್ರಮ ನಾಳೆಗೆ ಮುಂದೂಡಿಕೆ - ನದಿಗೆ ನೀರು ಹರಿಸುವ ಕಾರ್ಯಕ್ರಮ
ವಿವಿ ಸಾಗರದಿಂದ ವೇದಾವತಿ ನದಿಗೆ ನೀರು ಹರಿಸುವ ಕಾರ್ಯಕ್ರಮಕ್ಕೆ ಅಧಿಕಾರಿಗಳು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯವರ ಹಾದಿ ಕಾಯುತ್ತಿದ್ದು, ಒಂದು ದಿನದ ಮಟ್ಟಿಗೆ ಅಂದರೆ ನಾಳೆಗೆ ಕಾರ್ಯಕ್ರಮ ಮುಂದೂಡಿದ್ದಾರೆ.
ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹಲವು ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ ವಿವಿ ಸಾಗರದಿಂದ ವೇದಾವತಿ ನದಿಗೆ ನೀರು ಹರಿಸುವ ಕಾರ್ಯಕ್ರಮಕ್ಕೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯವರ ಹಾದಿ ಕಾಯುತ್ತಿದ್ದು, ಒಂದು ದಿನದ ಮಟ್ಟಿಗೆ ಅಂದರೆ ನಾಳೆ (23)ಗೆ ಕಾರ್ಯಕ್ರಮ ಮುಂದೂಡಿದ್ದಾರೆ. ನದಿಗೆ ನೀರು ಹರಿಸಲು ಸಚಿವರೇ ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕೆಂಬ ಉದ್ದೇಶದಿಂದ ಈ ರೀತಿ ಮಾಡಲಾಗಿದೆಯಂತೆ.
ವಿವಿ ಸಾಗರದಿಂದ 0.25 ಟಿಎಂಸಿ ನೀರು ವೇದಾವತಿ ನದಿಗೆ ಹರಿಸುವುದರಿಂದ ನದಿ ಪಾತ್ರದ ಹಳ್ಳಿಗಳಗಳ ಜನರು ಎಚ್ಚರಿಕೆಯಿಂದ ಇರಿ ಎಂದು ಅಧಿಕಾರಿಗಳು ಮನವಿ ಮಾಡಿದ್ದರು. ಜಲಾಶಯದಿಂದ ನದಿಗೆ ಹರಿಸುವ ನೀರು ಹಿರಿಯೂರು ತಾಲೂಕಿನ ಕಸವನಹಳ್ಳಿ, ಬಿದರಿಕೆರೆ ಬ್ಯಾಡ್ರಾಹಳ್ಳಿ, ಕತ್ರಿಕೆನಹಳ್ಳಿ, ಶಿಡ್ಲಯ್ಯನ ಕೋಟೆ ಸೇರಿದಂತೆ ಚಳ್ಳಕೆರೆ ತಾಲೂಕಿನ ಚೌಳೂರು, ಬೊಂಬೇರನಹಳ್ಳಿ, ಪರಶುರಾಮಪುರಕ್ಕೆ ತಲುಪಲಿದೆ. ರೈತರು ನೀರಿಗಾಗಿ ಕಾದು ಕೂತಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.