ETV Bharat Karnataka

ಕರ್ನಾಟಕ

karnataka

ETV Bharat / state

ಚಿತ್ರದುರ್ಗದಲ್ಲಿ ಕೊರೊನಾ ಮಂಜಾಗ್ರತಾ ಕ್ರಮಗಳೊಂದಿಗೆ ಮತದಾನ ಪ್ರಕ್ರಿಯೆ ಆರಂಭ - Voting started in Kote nadu

ಬೆಳಗ್ಗೆ 7 ಗಂಟೆಯಿಂದಲೇ ಕೋಟೆ ನಾಡಿನ ಸುಮಾರು 810 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದ್ದು ಸುಮಾರು 3640 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮತಗಟ್ಟ ಕೇಂದ್ರಗಳ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Voting started in Chitradurga
ಚಿತ್ರದುರ್ಗದಲ್ಲಿ ಮತದಾನ
author img

By

Published : Dec 22, 2020, 9:11 AM IST

ಚಿತ್ರದುರ್ಗ: ಇಂದು ರಾಜ್ಯಾದ್ಯಂತ ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆ ನಡೆಯುತ್ತಿದ್ದು ಕೋಟೆ ನಾಡು ಚಿತ್ರದುರ್ಗದಲ್ಲಿ ಕೂಡಾ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲೂಕುಗಳಲ್ಲಿ ಜನರು ಮತ ಚಲಾಯಿಸಲು ಮತಗಟ್ಟೆ ಕೇಂದ್ರಗಳ ಧಾವಿಸುತ್ತಿದ್ದಾರೆ.

ಚಿತ್ರದುರ್ಗದಲ್ಲಿ ಮತದಾನ ಪ್ರಕ್ರಿಯೆ ಆರಂಭ

ಇದನ್ನೂ ಓದಿ: ಬೆಳಗಾವಿ: ಕಣದಲ್ಲಿರುವ ದಂಪತಿಯಿಂದ ಮತ ಪೆಟ್ಟಿಗೆಗೆ ಪೂಜೆ

ಚಿತ್ರದುರ್ಗದ ಮೂರು ತಾಲೂಕುಗಳ ಪೈಕಿ ಒಟ್ಟು 810 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು 7 ಗಂಟೆಯಿಂದ ಮತದಾನ ಮಾಡಲು ಸಿಬ್ಬಂದಿಗಳು ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲದೆ ಮತಗಟ್ಟೆ ಕೇಂದ್ರದ ಸುತ್ತಲೂ ಪೊಲೀಸ್ ಬೀಗಿ ಬಂದೋಬಸ್ತ್​​​​​ ಏರ್ಪಡಿಸಲಾಗಿದೆ. ಮತದಾನ ಮಾಡಲು ಬರುವ ಜನರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ಯಾನಿಟೈಸರ್ ನೀಡುವ ಮೂಲಕ ಮತದಾನ ಮಾಡಲು ಸಾರ್ವಜನಿಕರಿಗೆ ಅನುವು ಮಾಡಿಕೊಡಲಾಗುತ್ತಿದೆ. ಇನ್ನು ಮತಗಟ್ಟೆಗಳಲ್ಲಿ ಇರುವ ಚುನಾವಣಾ ಸಿಬ್ಬಂದಿಗಳು ಕೂಡಾ ಕೊರೊನಾ ತಡೆಗೆ ಸುರಕ್ಷಿತ ಕಿಟ್​​​​​​​​ಗಳನ್ನು ಧರಿಸಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. 3640 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಚುನಾವಣಾಧಿಕಾರಿ ಕವಿತಾ ಮನ್ನಿಕೇರಿ, ಬಿಗಿ ಬಂದೋಬಸ್ತ್ ಏರ್ಪಡಿಸಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

ABOUT THE AUTHOR

...view details