ಚಿತ್ರದುರ್ಗ:ಅನರ್ಹರು ಯಾರು ಎಂಬುದನ್ನು ಮತದಾರರು ನಿರ್ಧಾರಿಸಿದ್ದಾರೆ, ಉಪಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಮತದಾರರೇ ಆಯ್ಕೆ ಮಾಡಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀ ರಾಮುಲು ಗೆದ್ದ ಶಾಸಕರ ಪರ ಟ್ವಿಟರ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅನರ್ಹರು ಯಾರು ಎಂಬುದನ್ನು ಮತದಾರರು ನಿರ್ಧಾರಿಸಿದ್ದಾರೆ...ಸಚಿವ ರಾಮುಲು ಟ್ವೀಟ್.! - ಆರೋಗ್ಯ ಸಚಿವ ಶ್ರೀ ರಾಮುಲು ಅನರ್ಹ ಶಾಸಕರ ಪರ ಟ್ವಿಟ್
ಅನರ್ಹರು ಯಾರು ಎಂಬುದನ್ನು ಮತದಾರರು ನಿರ್ಧಾರಿಸಿದ್ದಾರೆ, ಉಪ ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಮತದಾರರೇ ಆಯ್ಕೆ ಮಾಡಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಮರಳಿ ಅರ್ಹತೆ ಗಿಟ್ಟಿಸಿದ ಶಾಸಕರ ಪರ ಟ್ವಿಟರ್ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶ್ರೀ ರಾಮುಲು ಅನರ್ಹ ಶಾಸಕರ ಪರ ಟ್ವಿಟರ್
ಆರೋಗ್ಯ ಸಚಿವ ಬಿ. ಶ್ರೀರಾಮುಲು ಟ್ವಿಟರ್ನಲ್ಲಿ ತಮ್ಮ ಅಭಿಪ್ರಾಯ ಬರೆದುಕೊಂಡಿದ್ದು, ನಮ್ಮ ಅಭ್ಯರ್ಥಿಗಳನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ನವರು, ಅನರ್ಹರು ನಾಲಾಯಕ್ ಎಂದು ಟೀಕೆ ಮಾಡಿದ್ದರು.ಇನ್ನು ಹುಣಸೂರಿನ ಮತದಾರರ ತೀರ್ಪನ್ನು ಗೌರವಿಸುತ್ತೇನೆ, ಸೋಲಿಗೆ ನೆಪಗಳನ್ನು ಹೇಳಿದರೆ ಒಪ್ಪಿಕೊಳ್ಳುತ್ತೇವೆ, ನಮ್ಮ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಅವರನ್ನು ಬೆಂಬಲಿಸಿ ಎರಡನೇ ಸ್ಥಾನಕ್ಕೆ ಕೊಂಡೊಯ್ಯವ ಮೂಲಕ ಪಕ್ಷ ಅಸ್ತಿತ್ವದಲ್ಲಿದೆ ಎಂದು ತಿಳಿದು ಬಂದಿದ್ದು, ಮುಂದಿನ ದಿನಗಳಲ್ಲಿ ವಿಶ್ವನಾಥ್ ಅವರಿಗೆ ಒಳ್ಳೆಯ ಭವಿಷ್ಯ ಇದೆ ಎಂದು ರಾಮುಲು ಟ್ವಿಟ್ ಮಾಡಿದ್ದಾರೆ.