ಕರ್ನಾಟಕ

karnataka

ETV Bharat / state

ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲೇ ಕೈಗೆ ಮತ್ತೊಂದು ಗೆಲುವು! - undefined

ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲೇ ಕೋಟೆನಾಡು ಚಿತ್ರದುರ್ಗದಲ್ಲಿ ಕೈಗೆ ಮತ್ತೊಂದು ಐತಿಹಾಸಿಕ ಗೆಲುವು ದೊರೆತಿದ್ದು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಬಾಗೂರು ಕ್ಷೇತ್ರದ ಕೈ ಸದಸ್ಯೆಯಾದ ವಿಶಾಲಾಕ್ಷಿ ನಟರಾಜನ್ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ ಜಿಲ್ಲಾ ಪಂಚಾಯತ್​ ಅಧ್ಯಕ್ಷೆಯಾಗಿ ವಿಶಾಲಾಕ್ಷಿ ನಟರಾಜನ್ ಆಯ್ಕೆ

By

Published : Mar 23, 2019, 7:05 PM IST

ಚಿತ್ರದುರ್ಗ : ಲೋಕಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದಂತೆ ಕೋಟೆನಾಡಿನಲ್ಲಿ ಚುನಾವಣಾ ಚಟುವಟಿಕೆಗಳು ಗರಿಗೆದರಿದ್ದು, ಲೋಕ ಸಮರದ ಹೊಸ್ತಿಲಿನಲ್ಲೇ ಕೈಗೆ ಮತ್ತೊಂದು ಐತಿಹಾಸಿಕ ಗೆಲುವು ಸಂದಿದೆ.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದಂತಹ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಕಮಲಕ್ಕೆ ಸೆಡ್ಡು ಹೊಡೆದಿದೆ. ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲೇ ಕೋಟೆನಾಡು ಚಿತ್ರದುರ್ಗದಲ್ಲಿ ಕೈಗೆ ಮತ್ತೊಂದು ಐತಿಹಾಸಿಕ ಗೆಲುವು ದೊರೆತಿದ್ದು, ಅಧಿಕಾರವನ್ನು ಹಿಡಿಯಲು ಹೊರೆಟ್ಟಿದ್ದ ಕಮಲ ಪಾಳಯಕ್ಕೆ ಕಾಂಗ್ರೆಸ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷಗಿರಿಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಲೋಕಸಭಾ ಚುನಾವಣೆಗೆ ಸೆಡ್ಡು ಹೊಡೆದಿದೆ.

ಚಿತ್ರದುರ್ಗ ಜಿಲ್ಲಾ ಪಂಚಾಯತ್​ ಅಧ್ಯಕ್ಷೆಯಾಗಿ ವಿಶಾಲಾಕ್ಷಿ ನಟರಾಜನ್ ಆಯ್ಕೆ

15 ತಿಂಗಳ ಅಧಿಕಾರದ ಅವಧಿ ಮುಗಿದಿದ್ದರೂ ಈ ಹಿಂದಿನ ಅಧ್ಯಕ್ಷೆಯಾದಂತಹ ಸೌಭಾಗ್ಯ ಬಸವರಾಜನ್ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಲು ನಿರಾಕರಿಸಿದ್ದರು. ಇದರಿಂದ ಜಿ.ಪಂ. ಸದಸ್ಯರ ಕೆಂಗಣಿಗೆ ಗುರಿಯಾಗಿದ್ದಂತಹ ಸೌಭಾಗ್ಯ ಬಸವರಾಜನ್​ರವರ ವಿರುದ್ಧ ಅವಿಶ್ವಾಸ ಮಂಡನೆಯನ್ನು ಯಾಚಿಸಲಾಗಿತ್ತು. 37 ಜನ ಸದಸ್ಯರ ಪೈಕಿ 27 ಮಂದಿ ಭಾಗವಹಿಸಿದ್ರು. ಹೀಗಾಗಿ ತಮ್ಮ ಪರ ಕೇವಲ ಎರಡು ಮತಗಳನ್ನು ಪಡೆದ ಸೌಭಾಗ್ಯ ಬಸವರಾಜನ್ ಅಧ್ಯಕ್ಷ ಕುರ್ಚಿಯನ್ನು ಉಳಿಸಿಕೊಳ್ಳಲಾರದೆ ಹೊರ ನಡೆದರು. ಅಂದು ತೆರವಾದ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಬಾಗೂರು ಕ್ಷೇತ್ರದ ಕೈ ಸದಸ್ಯೆಯಾದ ವಿಶಾಲಾಕ್ಷಿ ನಟರಾಜನ್ ಅಧ್ಯಕ್ಷೆಯಾಗಿ ನಗೆ ಬೀರಿದರು.

ಇನ್ನು ಕೆಲ ಜಿ.ಪಂ. ಸದಸ್ಯರನ್ನು ಹಿಡಿದಿಟ್ಟುಕೊಂಡು ವಾಮಾ ಮಾರ್ಗದಲ್ಲಿ ಅಧಿಕಾರವನ್ನು ಹಿಡಿಯಲು ಹೊರಟ್ಟಿದ್ದ ಬಿಜೆಪಿಗೆ ಮಾಜಿ ಸಚಿವ ಹೆಚ್ ಆಂಜನೇಯ ಅವರು ಆಕ್ರೋಶ ವ್ಯಕ್ತಪಡಿಸುವ ಮೂಲಕ ನೂತನ ಅಧ್ಯಕ್ಷೆಗೆ ಶುಭಕೋರಿದರು.


For All Latest Updates

TAGGED:

ABOUT THE AUTHOR

...view details