ಕರ್ನಾಟಕ

karnataka

ETV Bharat / state

ಚಿತ್ರುದುರ್ಗ: ಸ್ವಯಂಪ್ರೇರಿತರಾಗಿ ಗ್ರಾಮಗಳ ಬಂದ್ ಮಾಡಿದ ಗ್ರಾಮಸ್ಥರು - ಹೇಚ್ಚುತ್ತಿರುವ ಕೊರೊನಾ ಚಿತ್ರುದುರ್ಗ ಜಿಲ್ಲೆಯಲ್ಲಿ ಗ್ರಾಮಗಳನ್ನ ಸ್ವಯಂ ಬಂದ್​ ಮಾಡಿದ ಗ್ರಾಮಸ್ಥರು

ಗ್ರಾಮದ ಕೆಲವರು ಬೇರೆ ಬೇರೆ ಊರುಗಳಿಗೆ ಕೆಲಸಕ್ಕಾಗಿ ವಲಸೆ ಹೋಗಿದ್ದು, ಈಗ ಗ್ರಾಮಕ್ಕೆ ಮರಳುತ್ತಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಗ್ರಾಮಸ್ಥರು ಗ್ರಾಮಕ್ಕೆ ಯಾರೂ ಬರಬಾರದೆಂದು ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದಾರೆ.

ಚಿತ್ರುದುರ್ಗ ಜಿಲ್ಲೆಯಲ್ಲಿ ಗ್ರಾಮಗಳನ್ನ ಸ್ವಯಂ ಬಂದ್​ ಮಾಡಿದ ಗ್ರಾಮಸ್ಥರು
ಚಿತ್ರುದುರ್ಗ ಜಿಲ್ಲೆಯಲ್ಲಿ ಗ್ರಾಮಗಳನ್ನ ಸ್ವಯಂ ಬಂದ್​ ಮಾಡಿದ ಗ್ರಾಮಸ್ಥರು

By

Published : May 3, 2021, 8:45 AM IST

ಚಿತ್ರದುರ್ಗ:ಚಳ್ಳಕೆರೆ ತಾಲೂಕಿನ ಕಾಪರಹಳ್ಳಿ ಗ್ರಾಮದ ಕೆಲವು ಜನರು ಬೇರೆ ಬೇರೆ ಊರುಗಳಿಗೆ ಕೆಲಸಕ್ಕಾಗಿ ವಲಸೆ ಹೋಗಿದ್ದು, ಈಗ ಗ್ರಾಮಕ್ಕೆ ವಾಪಸ್‌ ಆಗುತ್ತಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಗ್ರಾಮಸ್ಥರು ಗ್ರಾಮಕ್ಕೆ ಯಾರು ಬರಬಾರದೆಂದು ಸ್ವಯಂ ಬಂದ್‌ಗೆ ಮುಂದಾಗಿದ್ದಾರೆ.

ಗ್ರಾಮಗಳನ್ನ ಸ್ವಯಂ ಬಂದ್​ ಮಾಡಿದ ಗ್ರಾಮಸ್ಥರು

ಹಳ್ಳಿಗಳ ಪ್ರವೇಶ ದ್ವಾರಕ್ಕೆ ಕಟ್ಟಿಗೆ ಗೂಟಗಳನ್ನು ನೆಟ್ಟು, ದೊಡ್ಡ ದೊಡ್ಡ ಪೈಪ್‌ಗಳನ್ನು ಹಗ್ಗಗಳಿಂದ ಕಟ್ಟಿ ಪ್ರವೇಶ ದ್ವಾರ ಬಂದ್ ಮಾಡಿದ್ದಾರೆ. ಬಂದ್‌ ಬಗ್ಗೆ ಚಳ್ಳಕೆರೆ ತಾಲೂಕಿನ ಉಪ್ಪಾರಹಟ್ಟಿ, ದೊಡ್ಡೇರಿ, ಬೊಮ್ಮಸಂದ್ರ, ಕೆಂಚವೀರನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಡಂಗುರ ಸಾರಿದ್ದಾರೆ. ಹೊರಗಿನ ಜನರ ಗ್ರಾಮಗಳಿಗೆ ಪ್ರವೇಶ ಮಾಡದಂತೆ ಕಟ್ಟೆಚ್ಚರ ವಹಿಸಬೇಕು. ಕೊರೊನಾ ಸೋಂಕಿನಿಂದ ಗ್ರಾಮವನ್ನು ಉಳಿಸಿಕೊಳ್ಳಲು ಜನರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ಗ್ರಾಮಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಬಳಕೆಯನ್ನು ಕಡ್ಡಾಯವಾಗಿ ಪಾಲನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ನಾಟಿ ಕೋಳಿ ಸಾಕಾಣಿಕೆಯಿಂದ ಯಶಸ್ಸು .. ಮೊಟ್ಟೆ ಮರಿ ಮಾಡುವ ಸಾಧನ ತಯಾರಿಸಿದ ಹಾಸನ ಯುವಕ

For All Latest Updates

TAGGED:

ABOUT THE AUTHOR

...view details