ಚಿತ್ರದುರ್ಗ:ರಾಷ್ಟ್ರೀಯ ಹೆದ್ದಾರಿ ದಾಟಲು ಅವಶ್ಯಕವಾಗಿರುವ ಕೆಳ ಸೇತುವೆ ನಿರ್ಮಿಸುವಂತೆ ಆಗ್ರಹಿಸಿದ ವಿಜಾಪುರ ಗ್ರಾಮಸ್ಥರು, ಹೆದ್ದಾರಿಯಲ್ಲೇ ದನ, ಆಡು, ಕುರಿಗಳನ್ನು ಬಿಡುವ ಮೂಲಕ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಕೆಳ ಸೇತುವೆಗಾಗಿ ಗ್ರಾಮಸ್ಥರ ಆಗ್ರಹ: ದನ, ಕುರಿಗಳೊಂದಿಗೆ ಹೆದ್ದಾರಿಯಲ್ಲೇ ಜನರ ಪ್ರತಿಭಟನೆ - Villagers protest Animals
ಚಿತ್ರದುರ್ಗ ತಾಲೂಕಿನ ವಿಜಾಪುರ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಳ ಸೇತುವೆ ಮಾಡಿಕೊಡುವಂತೆ ಆಗ್ರಹಿಸಿದ ಗ್ರಾಮಸ್ಥರು, ರಸ್ತೆ ಮಧ್ಯದಲ್ಲಿ ಜಾನುವಾರುಗಳೊಂದಿಗೆ ಆಗಮಿಸಿ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ದನ-ಕುರಿಗಳೊಂದಿಗೆ ಬೀದಿಗಿಳಿದ ಗ್ರಾಮಸ್ಥರು
ದನ-ಕುರಿಗಳೊಂದಿಗೆ ಬೀದಿಗಿಳಿದ ಗ್ರಾಮಸ್ಥರು
ವಿಜಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಅಂಡರ್ ಬ್ರಿಡ್ಜ್ ಮಾಡುವ ಬದಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ದಿಢೀರ್ ರಸ್ತೆ ಮಾಡಲು ಮುಂದಾಗಿದ್ದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ರಸ್ತೆ ಮಾಡುವ ಬದಲು ಕೆಳ ಸೇತುವೆ ಮಾಡಿ ಕೊಡಿ ಎಂದು ಹೆದ್ದಾರಿ ಪ್ರಾಧಿಕಾರಕ್ಕೆ ಆಗ್ರಹಿಸಿದರು.
ಪೊಲೀಸರ ನೆರವಿನೊಂದಿಗೆ ರಸ್ತೆ ಮಾಡಿಸಲು ಮುಂದಾಗಿದ್ದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಗ್ರಾಮಸ್ಥರ ಪ್ರತಿಭಟನೆಯಿಂದಾಗಿ ಹಿಂದಿರುಗಿದರು.