ಕರ್ನಾಟಕ

karnataka

ETV Bharat / state

ಕೋವಿಡ್-19 ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ತರಕಾರಿ ವ್ಯಾಪಾರ ಬಂದ್

ಕೋವಿಡ್-19 ಆಸ್ಪತ್ರೆ ಬಳಿಯ ರಂಗಯ್ಯನ ಬಾಗಿಲು ರಸ್ತೆಯಲ್ಲಿ ತರಕಾರಿ ವ್ಯಾಪಾರ ಬಂದ್ ಮಾಡಲಾಗಿದೆ. ಮುಂಜಾಗ್ರತಾ‌‌‌ ಕ್ರಮವಾಗಿ ತರಕಾರಿ ವ್ಯಾಪಾರಿಗಳನ್ನು ನಗರದ ಮುಖ್ಯ ಮಾರುಕಟ್ಟೆಗೆ ಶಿಫ್ಟ್ ಮಾಡಲಾಗಿದೆ.

covid-19 hospital
covid-19 hospital

By

Published : May 9, 2020, 11:54 AM IST

ಚಿತ್ರದುರ್ಗ: ಲಾಕ್​​​​​ಡೌನ್​ನಿಂದ ತಾತ್ಕಾಲಿಕವಾಗಿ ನಿರ್ಮಿಸಿದ್ದ ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರಿಸಲಾಗಿದೆ. ಚಿತ್ರದುರ್ಗದ ಕೋವಿಡ್-19 ಆಸ್ಪತ್ರೆಗೆ 3 ಸೋಂಕಿತರನ್ನು ಶಿಫ್ಟ್ ಮಾಡಿದ ಹಿನ್ನೆಲೆಯಲ್ಲಿ ನಗರಸಭೆಯ ಅಧಿಕಾರಿಗಳು ಬೀದಿ ಬದಿಯ ತರಕಾರಿ ಮಾರುಕಟ್ಟೆಯನ್ನು ಮುಂಜಾಗ್ರತಾ ಕ್ರಮವಾಗಿ ನಗರದ ಸಂತೆ ಹೊಂಡದ ಬಳಿ ಸ್ಥಳಾಂತರಿಸಲಾಗಿದೆ.

ಕೋವಿಡ್-19 ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಆವರಣದಲ್ಲಿದ್ದು, ಆಸ್ಪತ್ರೆ ಬಳಿಯ ರಂಗಯ್ಯನ ಬಾಗಿಲು ರಸ್ತೆಯಲ್ಲಿ ತರಕಾರಿ ವ್ಯಾಪಾರ ಬಂದ್ ಮಾಡಲಾಗಿದೆ. ತರಕಾರಿ ವ್ಯಾಪಾರಿಗಳನ್ನು ನಗರದ ಮುಖ್ಯ ಮಾರುಕಟ್ಟೆಗೆ ಶಿಫ್ಟ್ ಮಾಡಲಾಗಿದೆ.

ತರಕಾರಿ ವ್ಯಾಪಾರ ಬಂದ್

ಮೂರು ಜನ ಸೋಂಕಿತರನ್ನು ಕೋವಿಡ್​​-19 ಆಸ್ಪತ್ರೆಗೆ ಸ್ಥಳಾಂತರಿಸಿದ್ದರಿಂದ ಅದೇ ಆಸ್ಪತ್ರೆ‌ ಮುಂಭಾಗ ಹಾದು ಹೋಗಿರುವ ರಸ್ತೆಗೆ ಬ್ಯಾರಿಕೇಡ್ ನಿರ್ಮಿಸಿ‌ ಜನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ನಗರದ ಮಧ್ಯ ಭಾಗದಲ್ಲಿ ಈ ಆಸ್ಪತ್ರೆ ಇರುವುದರಿಂದ ಜನರಲ್ಲಿ ಆತಂಕ ದ್ವಿಗುಣವಾಗಿದ್ದು, ಆಸ್ಪತ್ರೆ ಬಳಿಯ ರಂಗಯ್ಯನಬಾಗಿಲು ರಸ್ತೆ, ಜೋಗಿಮಟ್ಟಿ‌ ರಸ್ತೆಗೆ ಪೌರಾಯುಕ್ತ ಹನುಮಂತರಾಜು ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂಚಾರಕ್ಕೆ ನಿರ್ಬಂಧ ಹೇರಿದರು.

ABOUT THE AUTHOR

...view details