ಚಿತ್ರದುರ್ಗ: ಜಿಲ್ಲೆಯ ವೇದಾಂತ ಕಬ್ಬಿಣ ಅದಿರು ಖಾಸಗಿ ಕಂಪನಿ ವತಿಯಿಂದ 1,000 ಪಡಿತರ ಕಿಟ್‌ಗಳನ್ನು ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಚೇರಿಗೆ ಹಸ್ತಾಂತರಿಸಲಾಯಿತು.
ವಲಸೆ ಕಾರ್ಮಿಕರಿಗೆ ಸಹಾಯ ಹಸ್ತ ಚಾಚಿದ ಖಾಸಗಿ ಕಬ್ಬಿಣ ಅದಿರು ಕಂಪನಿ - ಚಿತ್ರದುರ್ಗ ಲೆಟೆಸ್ಟ್ ನ್ಯೂಸ್
ವಲಸೆ ಕಾರ್ಮಿಕರಿಗೆ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ಜಿಲ್ಲೆಯ ವೇದಾಂತ ಕಬ್ಬಿಣ ಅದಿರು ಖಾಸಗಿ ಕಂಪನಿ ವತಿಯಿಂದ 1,000 ಪಡಿತರ ಕಿಟ್‌ಗಳನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಚೇರಿಗೆ ಹಸ್ತಾಂತರಿಸಲಾಯಿತು.
Helps to migrant's
ಪಡಿತರ ಕಿಟ್‌ಗಳನ್ನು ವೇದಾಂತ ಕಬ್ಬಿಣ ಅದಿರು ವ್ಯವಹಾರ-ಕರ್ನಾಟಕ ಕಂಪನಿಯ ಪರವಾಗಿ ಮೇಘನಾ ಘೋಷ್, ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಉಮಾ ಮಹಾದೇವನ್ ರವರಿಗೆ ಹಸ್ತಾಂತರ ಮಾಡಿದರು.
ಈ ಪಡಿತರ ಕಿಟ್‌ಗಳನ್ನು ವಲಸೆ ಕಾರ್ಮಿಕರಿಗೆ ನೀಡುವ ಸಲುವಾಗಿ ಒದಗಿಸಲಾಗುತ್ತಿದ್ದು, ಅಕ್ಕಿ, ಗೋಧಿ ಹಿಟ್ಟು, ಆಲೂಗಡ್ಡೆ, ಈರುಳ್ಳಿ, ಸಂಸ್ಕರಿಸಿದ ಎಣ್ಣೆ, ಅರಿಶಿಣ, ಮೆಣಸಿನಕಾಯಿ, ಕೊತ್ತಂಬರಿ ಪುಡಿ, ಉಪ್ಪು, ಸಕ್ಕರೆ, ಚಹಾ ಇತ್ಯಾದಿ ಅಗತ್ಯ ವಸ್ತುಗಳನ್ನು ಒಳಗೊಂಡ ಕಿಟ್ ನೀಡಲಾಯಿತು.