ಚಿತ್ರದುರ್ಗ: ಜಿಲ್ಲೆಯ ವೇದಾಂತ ಕಬ್ಬಿಣದ ಅದಿರು ಕಂಪನಿ ಕೊರೊನಾ ವಿರುದ್ಧ ಹೋರಾಡಲು ಕೋವಿಡ್-19 ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಕೋಟಿ ರೂ. ದೇಣಿಗೆ ನೀಡಿದೆ.
ಸಿಎಂ ಪರಿಹಾರ ನಿಧಿಗೆ ವೇದಾಂತ ಕಂಪನಿಯಿಂದ 1 ಕೋಟಿ ರೂ. ದೇಣಿಗೆ - ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ
ವೇದಾಂತ ಕಬ್ಬಿಣದ ಅದಿರು ಕಂಪನಿಯ ವ್ಯವಹಾರ ನಿರ್ದೇಶಕ ಶ್ರೀ ಕೃಷ್ಣಾ ರೆಡ್ಡಿ ಮತ್ತು ಶ್ರೀಮತಿ ಮೇಘನಾ ಘೋಷ್ ಅವರು ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ವೇದಾಂತ ಕಬ್ಬಿಣದ ಅದಿರು ಕಂಪನಿಯ ವ್ಯವಹಾರ ನಿರ್ದೇಶಕ ಶ್ರೀ ಕೃಷ್ಣಾ ರೆಡ್ಡಿ ಮತ್ತು ಶ್ರೀಮತಿ ಮೇಘನಾ ಘೋಷ್ ಅವರು ಬೆಂಗಳೂರಿಗೆ ತೆರಳಿ 1 ಕೋಟಿ ರೂ.ಗಳ ಚೆಕ್ ನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಸ್ತಾಂತರಿದರು. ವೇದಾಂತ ಕಬ್ಬಿಣದ ಅದಿರು ಕಂಪನಿ ವ್ಯವಹಾರ ಚಿತ್ರದುರ್ಗ, ಗೋವಾ, ಜಾರ್ಖಂಡ್, ಮತ್ತು ವೈಜಾಗ್ ಜಿಲ್ಲಾ ಆಡಳಿತ ಕಚೇರಿಯೊಂದಿಗೆ ನಿಕಟ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಕೋವಿಡ್-19 ವಿರುದ್ಧ ಹೋರಾಡಲು ವೈದ್ಯಕೀಯ ಸೌಲಭ್ಯಗಳನ್ನು ಆಯಾ ಜಿಲ್ಲೆಗಳ ಜಿಲ್ಲಾಡಳಿತಗಳಿಗೆ ಒದಗಿಸಿದೆ.
ಈಗಾಗಲೇ ಈ ಕಂಪನಿ ಕೊರೊನಾ ವಾರಿಯರ್ಸ್ ಗಳನ್ನು ರಕ್ಷಿಸುವ ಉದ್ದೇಶದಿಂದ 250 ವೈಯಕ್ತಿಕ ರಕ್ಷಣಾ ಕಿಟ್‍ಗಳು ಮತ್ತು 5,000 ಕೈ ಕೈಗವಸುಗಳನ್ನು ಚಿತ್ರದುರ್ಗ ಜಿಲ್ಲಾ ಪೋಲಿಸರಿಗೆ ನೀಡಿದೆ. ಜಿಲ್ಲಾ ಆಸ್ಪತ್ರೆಗೆ 500 ಸ್ಯಾನಿಟೈಸರ್ ಬಾಟಲಿಗಳು, 2500 ಟ್ರಿಪಲ್ ಲೇಯರ್ ಎನ್ 95 ಮಾಸ್ಕ್ಗಳು , 500 ವೈಯಕ್ತಿಕ ರಕ್ಷಣಾ ಕಿಟ್‍ಗಳು ಮತ್ತು ತುರ್ತು ವೈದ್ಯಕೀಯ ಸೌಲಭ್ಯಗಳಿಗಾಗಿ ಆ್ಯಂಬುಲೆನ್ಸ್ನ್ನು ಒದಗಿಸಲಾಗಿದೆ. ಅಲ್ಲದೇ 3,400 ಪಡಿತರ ಕಿಟ್‍ಗಳನ್ನು ಜಿಲ್ಲಾಡಳಿತ ಕಚೇರಿಗೆ ಹಸ್ತಾಂತರಿಸಿದೆ.