ಚಿತ್ರದುರ್ಗ:ಸುತ್ತಿಗೆಯಿಂದ ಜಜ್ಜಿ ಅಪರಿಚಿತ ಮಹಿಳೆಯ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬಂಗಾರದೇವರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಸುತ್ತಿಗೆಯಿಂದ ಜಜ್ಜಿ ಅಪರಿಚಿತ ಮಹಿಳೆಯ ಕೊಲೆ.. - ಕಲ್ಲಿನ ಕ್ವಾರಿ
ಚಿತ್ರದುರ್ಗದಲ್ಲಿ ಸುಮಾರು 25ವರ್ಷದ ವಿವಾಹಿತೆಯನ್ನು ಸುತ್ತಿಗೆಯಿಂದ ಜಜ್ಜಿ ಕೊಲೆ ಮಾಡಲಾಗಿದೆ.
ಮಹಿಳೆಯ ಕೊಲೆ
ಬಂಗಾರದೇವರಹಟ್ಟಿ ಸಮೀಪದ ಸರ್ಕಾರಿ ಜಾಗದಲ್ಲಿ ಶವ ಪತ್ತೆಯಾಗಿದೆ. ಸುಮಾರು 25ವರ್ಷದ ವಿವಾಹಿತೆಯ ಬರ್ಬರ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ರಾಯಚೂರು ಜಿಲ್ಲೆಯಿಂದ ಬಂದಿದ್ದ ಮಹಿಳೆ ಕಲ್ಲಿನ ಕ್ವಾರಿಯಲ್ಲಿ ಕಲ್ಲು ಒಡೆಯುವ ಕೆಲಸ ಮಾಡುತ್ತಿದ್ದಳು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇನ್ನು ಜೊತೆಯಲ್ಲಿದ್ದವರೇ ಕೊಲೆ ಮಾಡಿ ಪರಾರಿಯಾಗಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.