ಕರ್ನಾಟಕ

karnataka

ETV Bharat / state

ಮೆಡಿಕಲ್ ಕಾಲೇಜು ನೀಡದ್ದಕ್ಕೆ ಆಕ್ರೋಶ: ಭಿಕ್ಷೆ ಬೇಡಿದ ಹಣ ಸರ್ಕಾರಕ್ಕೆ ನೀಡಿ ಪ್ರತಿಭಟನೆ

ಚಿತ್ರದುರ್ಗಕ್ಕೆ ಮೆಡಿಕಲ್​ ಕಾಲೇಜು ಮಂಜೂರು ಮಾಡುವಂತೆ ಕರ್ನಾಟಕ ನವ ನಿರ್ಮಾಣ ಸೇನೆ ಆಗ್ರಹಿಸಿದ್ದು, ಅದಕ್ಕಾಗಿ ಭಿಕ್ಷೆ ಬೇಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದೆ.

people unique protest for medical college sanction
ಪ್ರತಿಭಟನೆ

By

Published : Oct 13, 2020, 5:47 PM IST

ಚಿತ್ರದುರ್ಗ: 2013ರಲ್ಲಿ ಜಿಲ್ಲೆಗೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜು ಸ್ಥಳೀಯ ಜನಪ್ರತಿನಿಧಿಗಳ ಮಸಲತ್ತಿನಿಂದ ಕೈ ತಪ್ಪಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಪ್ರತಿಭಟನೆ

2013 ರಲ್ಲೇ ಚಿತ್ರದುರ್ಗಕ್ಕೆ ಮೆಡಿಕಲ್​ ಕಾಲೇಜು ಮಂಜೂರಾಗಿತ್ತು. ಬಳಿಕ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿ ಕುಮಾರಸ್ವಾಮಿ ಇದ್ದಾಗ ಅದೇ ಕಾಲೇಜಿನ ಮಂಜೂರಾತಿಯನ್ನು ರದ್ದುಪಡಿಸಿದ್ದು, ಮೆಡಿಕಲ್ ಕಾಲೇಜನ್ನು ರಾಮನಗರ ಜಿಲ್ಲೆಯ ಕನಕಪುರಕ್ಕೆ ಮಂಜೂರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗದ ಕರ್ನಾಟಕ ನವನಿರ್ಮಾಣ ಸೇನೆಯ ಪದಾಧಿಕಾರಿಗಳು ಮೆಡಿಕಲ್ ಕಾಲೇಜನ್ನು ಚಿತ್ರದುರ್ಗಕ್ಕೆ ಮರು ಮಂಜೂರು ಮಾಡಬೇಕೆಂದು ಭಿಕ್ಷೆ ಬೇಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ್ರು.

ಚಿತ್ರದುರ್ಗ ನಗರದ ಗಾಂಧಿ ವೃತ್ತದಿಂದ ಪ್ರತಿಭಟನೆ ಆರಂಭಿಸಿದ ಜನರು, ನಗರದ ಅಂಗಡಿಗಳಿಗೆ ತೆರಳಿ ಭಿಕ್ಷೆ ಬೇಡಿ, ಆ ಹಣವನ್ನು ಸರ್ಕಾರಕ್ಕೆ ನೀಡಿದರು. ಕಾಲೇಜು ಮರುಮಂಜೂರು ಮಾಡಲು ಸರ್ಕಾರದ ಬಳಿ ಹಣ ಇಲ್ಲದ್ದರಿಂದ, ಮಂಜೂರು ಮಾಡಲು ಆಗುವುದಿಲ್ಲ ಎನ್ನಲಾಗಿತ್ತು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಕರ್ನಾಟಕ ನವ ನಿರ್ಮಾಣ ಸೇನೆಯಿಂದ ಈ ರೀತಿ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ನೀಡಿದ್ದಾರೆ. ಬಳಿಕ ಸ್ಥಳೀಯ ಶಾಸಕ ತಿಪ್ಪಾರೆಡ್ಡಿ ಹಾಗು ಉಸ್ತುವಾರಿ ಸಚಿವ ಶ್ರೀರಾಮುಲುಗೆ ಬಳೆ, ಸೀರೆಯನ್ನು ಪೋಸ್ಟ್ ಮಾಡಲಾಯಿತು.

ABOUT THE AUTHOR

...view details