ಚಿತ್ರದುರ್ಗ:ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಆಧುನಿಕ ಭಸ್ಮಾಸುರರು. ದೇಶದಲ್ಲಿ ಭಸ್ಮಾಸುರರಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.
ಮೋದಿ, ಅಮಿತ್ ಶಾ ಆಧುನಿಕ ಭಸ್ಮಾಸುರರು: ಉಗ್ರಪ್ಪ ವಾಗ್ದಾಳಿ - ಬಿಜೆಪಿ ವಿರುದ್ದ ಉಗ್ರಪ್ಪ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಆಧುನಿಕ ಭಸ್ಮಾಸುರರು. ದೇಶದಲ್ಲಿ ಭಸ್ಮಾಸುರರಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪ್ರತಿಕ್ರಿಯಿಸಿದ ಅವರು, ದೇಶದ ಆರ್ಥಿಕತೆ ತಳಮಟ್ಟಕ್ಕೆ ಕುಸಿದಿದೆ. ಆದ್ರೆ ಮೋದಿಯವರು ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇನ್ನು ಈ ಬಿಜೆಪಿಯವರು ದೇಶದಲ್ಲಿ ಸಮಾಜವನ್ನು ಒಡೆದು ಆಳುವ ಕೆಲಸ ಮಾಡುವಲ್ಲಿ ನಿರತರಾಗಿದ್ದಾರೆ ಎಂದು ದೂರಿದರು. ಸಿಎಂ ಬಿಎಸ್ವೈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರನ್ನು ಕಂಡರೆ ನನಗೆ ಅಯ್ಯೋ ಅನಿಸುತ್ತದೆ. ರಾಜ್ಯದಲ್ಲಿ ಅವರು ರಾಜಾಹುಲಿ ಎಂದು ಕರೆಸಿಕೊಳ್ಳುತ್ತಿದ್ದವರು ಈಗ ರಾಜಾ ಇಲಿ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿಯಲ್ಲೇ ಬಿಎಸ್ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಸಂಚು ಕೂಡ ನಡೆಯುತ್ತಿದೆ. ಅವರಿಗೆ ತಾಕತ್ತಿದ್ದರೆ ಹೈಕಮಾಂಡ್ ವಿರುದ್ಧ ಸಿಡಿದೇಳಲಿ ಎಂದು ಉಗ್ರಪ್ಪ ಸವಾಲು ಹಾಕಿದರು.