ಚಿತ್ರದುರ್ಗ: ವಿಷಪೂರಿತ ಮೇವು ತಿಂದು 90 ಸಾವಿರ ರೂ. ಮೌಲ್ಯದ ಎರಡು ಎತ್ತುಗಳು ಮೃತಪಟ್ಟಿರುವ ಘಟನೆ ದೇವಪುರದಟ್ಟಿ ಗ್ರಾಮದಲ್ಲಿ ನಡೆದಿದೆ.
ಅನಾಥವಾದ ಅನ್ನದಾತ: ವಿಷಪೂರಿತ ಮೇವು ತಿಂದು ಎರಡು ಎತ್ತುಗಳು ಸಾವು - Two ox died
ಯಾರೋ ಕಿಡಿಗೇಡಿಗಳು ಮನೆ ಮುಂದೆ ಇದ್ದ ಮುಸುರೆ ಪಾತ್ರೆಗೆ ವಿಷ ಬೆರೆಸಿದ ಹಿನ್ನೆಲೆ ಅದನ್ನು ಸೇವಿಸಿದ 90 ಸಾವಿರ ರೂ. ಮೌಲ್ಯದ ಎರಡು ಎತ್ತುಗಳು ಮೃತಪಟ್ಟಿರುವ ಘಟನೆ ಚಿತ್ರದುರ್ಗದ ದೇವಪುರದಟ್ಟಿ ಗ್ರಾಮದಲ್ಲಿ ನಡೆದಿದೆ.
ದೇವಪುರದಟ್ಟಿ ಗ್ರಾಮದ ರಾಮಣ್ಣ ಎಂಬುವರ ಎರಡು ಎತ್ತುಗಳು ಮತ್ತು ನಾಯಿಯೊಂದು ವಿಷಪೂರಿತ ಆಹಾರ ತಿಂದು ಸಾವನ್ನಪ್ಪಿದೆ. ನಿನ್ನೆಯಷ್ಟೇ ಬೇಸಾಯ ಮಾಡಿ ಸಂಜೆ ಮನೆಯ ಬಳಿ ಎತ್ತು ಕಟ್ಟಿ ಹಾಕಿದ್ದೆ. ಯಾರೋ ಕಿಡಿಗೇಡಿಗಳು ಮನೆ ಮುಂದೆ ಇದ್ದ ಮುಸುರೆ ಪಾತ್ರೆಗೆ ವಿಷ ಹಾಕಿದ್ದಾರೆ. ಇದನ್ನು ಕುಡಿದ ಎತ್ತುಗಳು ಸಾವನ್ನಪ್ಪಿವೆ ಎಂದು ರಾಮಣ್ಣ ಆರೋಪಿಸಿದ್ದಾರೆ.
ಇನ್ನು ರಾಮಣ್ಣನ ಏಳಿಗೆಯನ್ನು ಸಹಿಸದವರು ಈ ದುಷ್ಕೃತ್ಯ ಮಾಡಿದ್ದಾರೆ. ಈ ಬಡಕುಟುಂಬ ಜೀವನ ನಡೆಸಲು ಸರ್ಕಾರ ಅಥವಾ ಯಾರಾದರೂ ದಾನಿಗಳು ಸಹಾಯ ಮಾಡಿದರೆ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.