ಚಿತ್ರದುರ್ಗ: ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಚೆಕ್ ಡ್ಯಾಗೆ ಇಳಿದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹಾಲಿಗೊಂಡನ ಹಳ್ಳಿಯಲ್ಲಿ ನಡೆದಿದೆ. ಚಳ್ಳಕೆರೆ ಸೂಜಿಮಲ್ಲೇಶ್ವರ ನಗರದ ಮಂಜುನಾಥ್ (35), ಮನಿಷಾ (8) ಮೃತರು. ಮಂಜುನಾಥ್ ಮೃತ ದೇಹ ಸಿಕ್ಕಿದ್ದು, ಮನಿಷಾ ಮೃತ ದೇಹಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಹುಡುಕಾಟ ನಡೆಸುತ್ತಿದ್ದಾರೆ.
ಚಿತ್ರದುರ್ಗ: ಚೆಕ್ ಡ್ಯಾಂ ನೀರಿನಲ್ಲಿ ಮುಳುಗಿ ಇಬ್ಬರ ಸಾವು - Two drowned in Vedavathi river
ತುಂಬಿ ಹರಿಯುತ್ತಿದ್ದ ಚೆಕ್ ಡ್ಯಾಂ ನೀರಿನಲ್ಲಿ ಇಬ್ಬರು ಮುಳುಗಿ ಸಾವನ್ನಪ್ಪಿರುವ ಘಟನೆ ಚಳ್ಳಕೆರೆ ತಾಲೂಕಿನ ಹಾಲಿಗೊಂಡನ ಹಳ್ಳಿಯಲ್ಲಿ ನಡೆದಿದೆ.
ಇಬ್ಬರು ಸಾವು
ಪರುಶುರಾಮಪುರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಶಾಸಕ ಟಿ. ರಘುಮೂರ್ತಿ, ಚಳ್ಳಕೆರೆ ತಹಶೀಲ್ದಾರ್ ಎನ್. ರಘುಮೂರ್ತಿ, ಸಿಪಿಐ ತಿಪ್ಪೇಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಮುಖಂಡರು ರಾಜ್ಯಪಾಲರಿಗೆ ನೀಡಿರುವ ದೂರು ಹಾಸ್ಯಾಸ್ಪದ ವಿಷಯ: ಸಿಎಂ ಬೊಮ್ಮಾಯಿ