ಚಿತ್ರದುರ್ಗ: ಜಾನುವಾರುಗಳಿಗೆ ನೀರು ಕುಡಿಸಲು ತೆರಳಿ ಇಬ್ಬರು ನೀರು ಪಾಲಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ದೊಡ್ಡ ಅಬ್ಬಿಗೆರೆ ಗ್ರಾಮದಲ್ಲಿ ನಡೆದಿದೆ.
ಜಾನುವಾರುಗಳಿಗೆ ನೀರು ಕುಡಿಸಲು ಹೋಗಿ ಸಹೋದರರಿಬ್ಬರು ನೀರುಪಾಲು ದೊಡ್ಡ ಅಬ್ಬಿಗೆರೆ ಬಳಿಯ ಕಲ್ಲುಕ್ವಾರಿಯ ನೀರಿನಲ್ಲಿ ಮುಳುಗಿ ಸಹೋದರರಿಬ್ಬರು ಸಾವನಪ್ಪಿದ್ದಾರೆ. ಮೃತರು ದೊಡ್ಡ ಅಬ್ಬಿಗೆರೆ ಗ್ರಾಮದ ನಂದಕುಮಾರ (14), ಪವನ್ (12) ಎಂದು ಗುರುತಿಸಲಾಗಿದೆ.
ಜಾನುವಾರುಗಳಿಗೆ ನೀರು ಕುಡಿಸಲು ಹೋಗಿ ಸಹೋದರರಿಬ್ಬರು ನೀರುಪಾಲು ಮಾಹಿತಿ ತಿಳಿದ ಚಿಕ್ಕಜಾಜೂರು ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಮೃತ ದೇಹವನ್ನು ಹೊರ ತೆಗೆದು ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಮಕ್ಕಳಿಬ್ಬರನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಘಟನೆ ಸಂಬಂಧ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.