ಚಿತ್ರದುರ್ಗ: ಕಾಲು ಜಾರಿ ಗೋಕಟ್ಟೆಯಲ್ಲಿ ( ಗೋವುಗಳು ನೀರು ಕುಡಿಯಲು ಮಾಡಿದ್ದ ಬಾವಿ) ಬಿದ್ದು ಇಬ್ಬರು ಯುವಕರು ಸಾವಿಗೀಡಾದ ಘಟನೆ ಚಿತ್ರದುರ್ಗ ತಾಲೂಕಿನ ಜಾಲಿಕಟ್ಟೆ ಗ್ರಾಮದಲ್ಲಿ ನಡೆದಿದೆ.
ಗೋಕಟ್ಟೆಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಯುವಕರು ಸಾವು - ಇಬ್ಬರು ಯುವಕರು ಸಾವು
ಚಿತ್ರದುರ್ಗದಲ್ಲಿ ಇಬ್ಬರು ಯುವಕರು ಗೋಕಟ್ಟೆಗೆ ಕಾಲು ಜಾರಿ ಬಿದ್ದು ನೀರುಪಾಲಾಗಿದ್ದಾರೆ.
ಇಬ್ಬರು ಯುವಕರು ನೀರು ಪಾಲು
ಜಾಲಿಕಟ್ಟೆ ಗ್ರಾಮದ ನಿವಾಸಿಗಳಾದ ಅಂಜನಿ (23) ಮತ್ತು ವಸಂತ್ (24) ಮೃತ ಯುವಕರು ಎಂದು ಗುರುತಿಸಲಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.