ಕರ್ನಾಟಕ

karnataka

ETV Bharat / state

ಸೇತುವೆ ದಾಟುವಾಗ ಇಬ್ಬರು ಯುವಕರು ನೀರು ಪಾಲು ಒಬ್ಬ ಪಾರು - Etv Bharat Kannada

ತುಂಬಿ ಹರಿಯುತ್ತಿದ್ದ ಹಳ್ಳದಾಟಲು ಯತ್ನಿಸಿದಾಗ ಬೈಕ್​ ಸವಾರರಿಬ್ಬರು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.

Kn- ctd-
ನೀರು ಪಾಲಾಗಿರುವ ಸವಾರರಿಗಾಗಿ ಹುಡುಕಾಟ

By

Published : Sep 13, 2022, 10:31 PM IST

ಚಿತ್ರದುರ್ಗ: ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಯತ್ನಿಸಿದ ಬೈಕ್​ ಸವಾರರಿಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಮತ್ತೊಬ್ಬ ಸವಾರ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕೊರ್ಲಕುಂಟೆ ಗ್ರಾಮದಲ್ಲಿ ನಡೆದಿದೆ.

ಭಾರಿ ಮಳೆಯಿಂದಾಗಿ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದ್ದು, ಈ ವೇಳೆ ಬೈಕ್​ ಮೇಲೆ ಪ್ರಯಾಣಿಸುತ್ತಿದ್ದ ಮೂವರು ಸವಾರರು ಹಳ್ಳವನ್ನು ದಾಟಲು ಮುಂದಾದಗ ನೀರಿನ ರಭಸಕ್ಕೆ ವಾಹನ ಕೊಚ್ಚಿಕೊಂಡು ಹೋಗಿದ್ದು, ಕೊರ್ಲಕುಂಟೆ ಗ್ರಾಮದ ಓಬಳೇಶ್(35), ಕುಮಾರ(35) ನೀರು ಪಾಲಾಗಿದ್ದಾರೆ. ಇನ್ನು ಮಂಜುನಾಥ್ ಎಂಬುವವರು ಈಜಿ ದಡ ಸೇರಿದ್ದು, ನಿನ್ನೆ ರಾತ್ರಿ ಈ ಘಟನೆ ನಡೆದಿದೆ

ಇನ್ನು ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕದಳ, ಪೊಲೀಸರಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಇಬ್ಬರಿಗಾಗಿ ಶೋಧ ಕಾರ್ಯ ನಡೆಸಿದ್ದು, ಪರಶುರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಈಜಲು ಹೋಗಿ ಮೆಡಿಕಲ್ ವಿದ್ಯಾರ್ಥಿಗಳು ನಾಪತ್ತೆ.. ಕೆರೆಯಲ್ಲಿ ಮುಳುಗಿರುವ ಶಂಕೆ

ABOUT THE AUTHOR

...view details