ಚಿತ್ರದುರ್ಗ:ಜಿಂಕೆ ಚರ್ಮ ಮತ್ತು ಕೊಂಬನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಚಳ್ಳಕೆರೆ ನಗರದ ಹನುಮ ಬಡಾವಣೆಯಲ್ಲಿ ಬಂಧಿಸಲಾಗಿದೆ.
ಜಿಂಕೆ ಚರ್ಮ, ಕೊಂಬು ಮಾರಾಟಕ್ಕೆ ಯತ್ನ: ಚಳ್ಳಕೆರೆಯಲ್ಲಿ ಇಬ್ಬರ ಬಂಧನ - chtradurga news
ಚಿಂಕೆಯ ಚರ್ಮ, ಕೊಂಬು ಹಾಗೂ ಚಿಪ್ಪು ಹಂದಿಯ 3.8 ಕೆಜಿ ಚಿಪ್ಪುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಚಳ್ಳಕೆರೆ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
CD arrest
ಆರೋಪಿಗಳಿಂದ ಜಿಂಕೆ ಚರ್ಮ, ಎರಡು ಕೊಂಬುಗಳು ಹಾಗೂ ಚಿಪ್ಪು ಹಂದಿಯ 3.8 ಕೆಜಿ ತೂಕದ ಚಿಪ್ಪುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಶಾಲಾಬ್ಯಾಗ್ನಲ್ಲಿ ತಂದು ಮಾರಾಟಕ್ಕೆ ಮುಂದಾದಾಗ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದರು.
ಚಳ್ಳಕೆರೆ ತಾಲೂಕಿನ ಟಿ ಎನ್ ಕೋಟೆ ನಿವಾಸಿ ರಮೇಶ್ (36), ಬೊಮ್ಮಸಮುದ್ರದ ಗ್ರಾಮದ ನರಸಿಂಹ ಮೂರ್ತಿ (31) ಬಂಧಿತರು. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು, ವಲಯ ಅರಣ್ಯಾಧಿಕಾರಿ ಸತೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.