ಕರ್ನಾಟಕ

karnataka

ETV Bharat / state

ಮಂಗಳಮುಖಿ ಹತ್ಯೆ ಪ್ರಕರಣ; ಅರೋಪಿಯನ್ನು ಬಂಧಿಸಿದ ಚಿತ್ರದುರ್ಗ ಪೊಲೀಸ್​​ - ಮಂಗಳಮುಖಿ ಹತ್ಯೆ ಪ್ರಕರಣ

ಹಿರಿಯೂರು ತಾಲೂಕಿನ ಪಾಲವ್ವನಹಳ್ಳಿ ಬಳಿ ನಡೆದಿದ್ದ ಮಂಗಳಮುಖಿ ಹತ್ಯೆ ಪ್ರಕರಣವನ್ನು ಭೇದಿಸಿರುವ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

transgender-murder-case-chitradurga-police-arrested-accused
ಮಂಗಳಮುಖಿ ಹತ್ಯೆ ಪ್ರಕರಣ

By

Published : Sep 4, 2020, 4:57 PM IST

ಚಿತ್ರದುರ್ಗ : ಪಾಲವ್ವನಹಳ್ಳಿ ಬಳಿ ನಡೆದಿದ್ದ ಮಂಗಳಮುಖಿ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಚಿತ್ರದುರ್ಗದ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಆಗಸ್ಟ್ 28 ರಂದು ಜಿಲ್ಲೆಯ ಹಿರಿಯೂರು ತಾಲೂಕಿನ ಪಾಲವ್ವನಹಳ್ಳಿ ಬಳಿ ಅಂಜಲಿ (27) ಎಂಬ ಮಂಗಳಮುಖಿಯ ಹತ್ಯೆಯಾಗಿತ್ತು. ಪ್ರಕರಣ ಜಾಡು ಹಿಡಿದು ತನಿಖೆ ಆರಂಭಿಸಿದ ಪೊಲೀಸರು ಮುತ್ತಯ್ಯನಹಟ್ಟಿಯ ಆಟೋ ಚಾಲಕ ಮಧುಸೂಧನ್ (24) ಎಂಬಾತನನ್ನು ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ಆರೋಪಿ ಮಧುಸೂಧನ್ ಅಂಜಲಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ರಾಷ್ಟ್ರೀಯ ಹೆದ್ದಾರಿ ಪಕ್ಕದ ಪಾಲವ್ವನಹಳ್ಳಿ ಬಳಿಯ ಗುಡ್ಡದ ಪಕ್ಕದ ಪಾಳು ಜಮೀನಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಅವರಿಬ್ಬರ ನಡುವೆ ದುಡ್ಡಿಗಾಗಿ ವಾಗ್ವಾದ ಆಗಿದೆ. ಅಲ್ಲದೆ ಫೋಟೊ ಫೇಸ್‌ಬುಕ್‌ನಲ್ಲಿ ಹಾಕಿ ಮಾನ ಹರಾಜು ಹಾಕುವುದಾಗಿ ಅಂಜಲಿ ಯುವಕನ್ನು ಬೆದರಿಸಿದ್ದಳು.

ಇದಕ್ಕೆ ಹೆದರಿದ ಮಧುಸೂಧನ್ ಅಂಜಲಿಯನ್ನು ಪುಸಲಾಯಿಸಿ ಮತ್ತೊಮ್ಮೆ ಲೈಂಗಿಕ ಕ್ರಿಯೆ ಮಾಡುವ ನೆಪದಲ್ಲಿ ಅವಳನ್ನು ಬೆನ್ನು ಮೇಲೆ ಮಾಡಿ ಮಲಗಿಸಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದನು.

ABOUT THE AUTHOR

...view details