ಚಿತ್ರದುರ್ಗ: ನಿನ್ನೆಯಿಂದ ನಾಪತ್ತೆಯಾಗಿದ್ದ ಮಂಗಳಮುಖಿ ಅಂಜಲಿ ಎಂಬುವವರ ಶವ ಹಿರಿಯೂರು ತಾಲೂಕಿನ ಪಾಲವ್ವನಹಳ್ಳಿ ಬಳಿ ಪತ್ತೆಯಾಗಿದೆ.
ಚಿತ್ರದುರ್ಗ: ನಾಪತ್ತೆಯಾಗಿದ್ದ ಮಂಗಳಮುಖಿ ಶವಪತ್ತೆ - ಪಾಲವ್ವನಹಳ್ಳಿ ಬಳಿ ಮಂಗಳಮುಖಿ ಶವಪತ್ತೆ
ನಾಪತ್ತೆ ಆಗಿದ್ದ ಮಂಗಳಮುಖಿ ಅಂಜಲಿ ಶವವಾಗಿ ಇಂದು ಚಿತ್ರದುರ್ಗದ ಹಿರಿಯೂರು ತಾಲೂಕಿನ ಪಾಲವ್ವನಹಳ್ಳಿ ಬಳಿ ಪತ್ತೆಯಾಗಿದ್ದಾಳೆ. ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
![ಚಿತ್ರದುರ್ಗ: ನಾಪತ್ತೆಯಾಗಿದ್ದ ಮಂಗಳಮುಖಿ ಶವಪತ್ತೆ transgender-dead-body-found-in-palavvanahalli](https://etvbharatimages.akamaized.net/etvbharat/prod-images/768-512-8631038-thumbnail-3x2-death.jpg)
ಮಂಗಳಮುಖಿ ಶವಪತ್ತೆ
ತಲೆ ಮೇಲೆ ಕಲ್ಲು ಎತ್ತಿ ಹಾಕಿ ಅಂಜಲಿ(35) ಕಗ್ಗೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಾಹಿತಿ ತಿಳಿದು ಡಿವೈಎಸ್ಪಿ ಪಾಂಡುರಂಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.
ಐಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.