ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ತುರುವನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಳಾಂತರ ವಿರೋಧಿಸಿ ಶಾಸಕ ಟಿ. ರಘುಮೂರ್ತಿ ಚಿತ್ರದುರ್ಗದ ಒನಕೆ ಒಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ರು.
ತುರುವನೂರಿನಿಂದ ನಿಪ್ಪಾಣಿಗೆ ಕಾಲೇಜು ಸ್ಥಳಾಂತರ: ವಿರೋಧಿಸಿ ಶಾಸಕ ರಘುಮೂರ್ತಿ ಧರಣಿ - Thuruvanoor to Nippani
ತುರುವನೂರು ಗ್ರಾಮದಲ್ಲಿರುವ ಡಿಗ್ರಿ ಕಾಲೇಜ್ನನ್ನು ನಿಪ್ಪಾಣಿಗೆ ಸ್ಥಳಾಂತರ ಮಾಡಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.
ನಿಪ್ಪಾಣಿಗೆ ಕಾಲೇಜು ಸ್ಥಳಾಂತರ ವಿರೋಧಿಸಿ ಶಾಸಕ ರಘುಮೂರ್ತಿ ಧರಣಿ
ವಿದ್ಯಾರ್ಥಿಗಳು, ಕಾಂಗ್ರೆಸ್ ಕಾರ್ಯಕರ್ತರು ಸೇರಿ ರಾಜ್ಯ ಸರ್ಕಾರ ಹಾಗು ಉಸ್ತುವಾರಿ ಸಚಿವ ಶ್ರೀ ರಾಮುಲು ವಿರುದ್ಧ ಆಕ್ರೋಶ ಹೊರಹಾಕಿದ್ರು.
ತುರುವನೂರಿನಿಂದ ನಿಪ್ಪಾಣಿಗೆ ಕಾಲೇಜ್ನನ್ನು ಶಿಫ್ಟ್ ಮಾಡದಂತೆ ಕಾಂಗ್ರೆಸ್ ಶಾಸಕ ರಘುಮೂರ್ತಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು. ಸಚಿವರಾದ ಶ್ರೀರಾಮುಲು, ಶಶಿಕಲಾ ಜೊಲ್ಲೆ ಪ್ರಭಾವದಿಂದ ಕಾಲೇಜು ಸ್ಥಳಾಂತರ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ರು.
Last Updated : Aug 6, 2020, 4:29 PM IST