ಚಿತ್ರದುರ್ಗ: ಇಟ್ಟಿಗೆ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಳ್ಳಕೆರೆ ತಾಲೂಕಿನ ರೇಖಲಗೆರೆ ಗ್ರಾಮದ ನಡೆದಿದೆ.
ಇಂದು ಬೆಳಗ್ಗೆ ಮನೆ ನಿರ್ಮಾಣಕ್ಕೆಂದು ಟ್ರ್ಯಾಕ್ಟರ್ ಮೂಲಕ ಇಟ್ಟಿಗೆ ಸಾಗಿಸುತ್ತಿದ್ದಾಗ ಈ ಅಪಘಾತವಾಗಿದೆ. ಏಕಾಏಕಿ ಟ್ರ್ಯಾಕ್ಟರ್ ಪಲ್ಟಿಯಾಗಿ ಮೊಳಕಾಲ್ಮೂರು ಮೂಲದ ಬಸಣ್ಣ (23) ಹಾಗೂ ಶಶಿಕುಮಾರ್ (25) ಎಂಬ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.