ಕರ್ನಾಟಕ

karnataka

ETV Bharat / state

ಟ್ರ್ಯಾಕ್ಟರ್ & ಬೊಲೆರೊ ನಡುವೆ ಅಪಘಾತ: ಮೂವರು ಕಾರ್ಮಿಕರು ಸಾವು - ಟ್ರ್ಯಾಕ್ಟರ್ ಮತ್ತು ಬೊಲೆರೊ ನಡುವೆ ಅಪಘಾತ

ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದ ಕೂಲಿ ಕಾರ್ಮಿಕರು ತವರಿಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Tractor and bolero accident
ಟ್ರ್ಯಾಕ್ಟರ್ ಮತ್ತು ಬೊಲೆರೊ ನಡುವೆ ಅಪಘಾತ

By

Published : Mar 29, 2020, 1:39 PM IST

ಚಿತ್ರದುರ್ಗ : ಟ್ರ್ಯಾಕ್ಟರ್ ಹಾಗೂ ಬೊಲೆರೊ ವಾಹನದ ನಡುವೆ ಅಪಘಾತ ಸಂಭವಿಸಿದ್ದು, ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಹಿರಿಯೂರು ಬಳಿ ನಡೆದಿದೆ.

ಟ್ರ್ಯಾಕ್ಟರ್ ಮತ್ತು ಬೊಲೆರೊ ನಡುವೆ ಅಪಘಾತ

ಸಕ್ಕಪ್ಪ (27), ಮಾನಪ್ಪ (22), ಮಹಾದೇವಪ್ಪ (25) ಮೃತ ಕಾರ್ಮಿಕರು.

ಇವರೆಲ್ಲ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹಾರನೂರು ಗ್ರಾಮದವರಾಗಿದ್ದಾರೆ. ಟ್ರ್ಯಾಕ್ಟರ್​ನಲ್ಲಿದ್ದ 13 ಜನರಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕೊರೊನಾ ಭಯದಿಂದ ಜೇವರ್ಗಿಗೆ ಮರಳುತ್ತಿದ್ದರು. ಈ ವೇಳೆ ದುರ್ಘಟನೆ ಘಟಿಸಿದೆ.

ಘಟನಾ ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details