ಚಿತ್ರದುರ್ಗ:ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಭೂತಪ್ಪ ಹಾಗೂ ಅಕೌಂಟ್ಸ್ ಕನ್ಸಲ್‍ಟೆಂಟ್ ಸರ್ಪರಾಜ್ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಅಧಿಕಾರಿಗಳು - Chitradurga ACB attack
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಭೂತಪ್ಪ ಹಾಗೂ ಅಕೌಂಟ್ಸ್ ಕನ್ಸಲ್‍ಟೆಂಟ್ ಸರ್ಪರಾಜ್ 5,000 ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಅವಶ್ಯವಿರುವ 99,643 ರೂ. ಮೌಲ್ಯದ ಅಲ್ಯೂಮಿನಿಂ ಗ್ಲಾಸ್ ಪಾರ್ಟಿಶಿಯನ್ ಸಾಮಗ್ರಿಗಳನ್ನು ಪೂರೈಸಲು ವೈ.ಆರ್.ನಾಗೇಂದ್ರ ಅವರಿಗೆ ಸೂಚಿಸಲಾಗಿತ್ತು. ಈ ಸಾಮಗ್ರಿಗಳನ್ನು ಸರಬರಾಜು ಮಾಡಿದ ಬಳಿಕ 60,000 ರೂ. ಮಾತ್ರ ಜಮಾ ಮಾಡಲಾಗಿತ್ತು. ಬಾಕಿ ಮೊತ್ತ 39,643 ರೂ. ಪಾವತಿಸಲು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಭೂತಪ್ಪ, ಅಕೌಂಟ್ಸ್ ಕನ್ಸಲ್‍ಟೆಂಟ್ ಸರ್ಫರಾಜ್ ಮೂಲಕ ಅಂಗಡಿ ಮಾಲೀಕನಿಂದ 5,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಕುರಿತು ಅಂಗಡಿ ಮಾಲೀಕ ಎಸಿಬಿಗೆ ದೂರು ನೀಡಿದ್ದರು. ಇಂದು ಡಿವೈಎಸ್‍ಪಿ ಪರಮೇಶ್ವರ್ ಹೆಚ್.ಎಸ್, ಇನ್ಸ್ಸ್ಪೆಕ್ಟರ್ ಪ್ರಹ್ಲಾದ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.