ಚಿತ್ರದುರ್ಗ: ಇಂದಿನಿಂದ ಸತತ ಮೂರು ದಿನಗಳ ಕಾಲ ಚಿತ್ರದುರ್ಗದಲ್ಲಿ ಭಾರಿ ಮಳೆಯಾಗುವ ಸಂಭವ ಇದೆ ಎಂಬ ಹವಾಮಾನ ಇಲಾಖೆಯ ಸೂಚನೆಯಂತೆ ಇಂದು ಭಾರೀ ಗಾಳಿ ಸಹಿತ ಮಳೆಯಾಗಿದೆ.
ಚಿತ್ರದುರ್ಗದಲ್ಲಿ ಗಾಳಿ ಸಹಿತ ಭಾರೀ ಮಳೆ: ಇನ್ನೆರಡು ದಿನ ವರುಣನ ಅಬ್ಬರ - ಚಿತ್ರದುರ್ಗ ಸುದ್ದಿ
ಹವಾಮಾನ ಇಲಾಖೆ ಮುನ್ಸೂಚನೆಯಂತೆ ಇಂದಿನಿಂದ ಮಳೆರಾಯ ಬರದ ನಾಡಿಗೆ ಲಗ್ಗೆ ಇಟ್ಟಿದ್ದಾನೆ.

ಚಿತ್ರದುರ್ಗದಲ್ಲಿ ಗಾಳಿ ಸಹಿತ ಭಾರಿ ಮಳೆ
ಚಿತ್ರದುರ್ಗದಲ್ಲಿ ಗಾಳಿ ಸಹಿತ ಭಾರೀ ಮಳೆ
ಮಳೆ ಸುರಿದ ಪರಿಣಾಮ ಬಿಸಿಲಿನಿಂದ ಬಸವಳಿದಿದ್ದ ಜನರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ವರುಣ ತೋರಿದ ಕರುಣೆ ಬರದ ನಾಡಿನ ರೈತರ ಮೊಗದಲ್ಲೂ ಸಂತಸ ಮೂಡಿಸಿದೆ. ಒಂದು ಗಂಟೆಗಿಂತ ಹೆಚ್ಚು ಕಾಲ ಸುರಿದ ಧಾರಾಕಾರ ಮಳೆ ಇಳೆಯನ್ನೂ ತಂಪು ಮಾಡಿದೆ. ಮಳೆ ನಂಬಿ ಬಿತ್ತನೆ ಆರಂಭಿಸುವ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಲು ಸಜ್ಜಾಗಿದ್ದಾರೆ.