ಕರ್ನಾಟಕ

karnataka

ETV Bharat / state

ಚಿತ್ರದುರ್ಗ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ... - ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಒಂದೇ ಕುಟುಂಬದ ಮೂವರು

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಒಂದೇ ಕುಟುಂಬದ ಮೂವರು ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ.

Kn-ctd
ಒಂದೇ ಕುಟುಂಬದ ಮೂರು ಜನ ಆತ್ಮಹತ್ಯೆ

By

Published : Nov 4, 2022, 3:38 PM IST

ಚಿತ್ರದುರ್ಗ: ನೀರಿನಲ್ಲಿ ವಿಷ ಬೆರೆಸಿ ಕುಡಿದು ಮೂವರು ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ನಡೆದಿದೆ.

ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ಒಂದೇ ಕುಟುಂಬದ ಮೂರು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಿಪ್ಪಮ್ಮ(70), ಮಾರಕ್ಕ(45), ದ್ಯಾಮಕ್ಕ(43) ಆತ್ಮಹತ್ಯೆಗೆ ಶರಾಣಾಗಿದ್ದಾರೆ. ಮೃತರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಅಕ್ಕ ಪಕ್ಕದ ಮನೆಯವರು ತಿಳಿಸಿದ್ದಾರೆ. ಬೆಳಗಿನ ಜಾವ 4 ಗಂಟೆ ಸುಮಾರಿನಲ್ಲಿ ಮೂರು ಜನರು ಶಾಲು ಹೊದ್ದುಕೊಂಡು ಹೊರಗೆ ಬಂದವರು ಬೆಳಗಾದರೂ ಬಾಗಿಲು ತೆಗೆಯದೆ ಹೊರಗೂ ಬಾರದೆ ಇರುವುದರಿಂದ ಅನುಮಾನಗೊಂಡ ಅಕ್ಕ ಪಕ್ಕದವರು ಬಾಗಿಲು ತಟ್ಟಿದ್ದಾರೆ.

ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಕಿಟಕಿಯಿಂದ ನೀರು ಎರಚಿದ್ದಾರೆ ಅದಕ್ಕೂ ಸ್ಪಂದಿಸದೇ ಇದ್ದದ್ದು ಅನುಮಾನ ಮೂಡಿಸಿದೆ. ಕೂಡಲೇ ಸ್ಥಳಿಯರು ಚಳ್ಳಕೆರೆ ಪೋಲಿಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ದಾವಿಸಿದ ಚಳ್ಳಕೆರೆ ಪೋಲಿಸರು ಬಾಗಿಲು ಒಡೆದು ಒಳ ಪ್ರವೇಶ ಮಾಡಿದಾಗ ಮೂವರು ಸಾವನ್ನಪ್ಪಿರುವುದು ತಿಳಿದುಬಂದಿದೆ.

ಕಳೆದ ವರ್ಷ ಅಕ್ಟೋಬರ್ 6 ರಂದು ತಿಪ್ಪಮ್ಮ ಪತಿ ಹಾಗೂ ಮಗ ದ್ಯಾಮಣ್ಣ(46) ಅನಾರೋಗ್ಯದಿಂದ ಮೃತಪಟ್ಟಿದ್ದರು. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಇದರ ಜೊತೆಗೆ ಇಬ್ಬರು ಹೆಣ್ಣು ಮಕ್ಕಳು ಕೌಟುಂಬಿಕ ಕಲಹದಿಂದ ತವರು ಸೇರಿಕೊಂಡಿದ್ದರು. ಗಂಡು ದಿಕ್ಕಿಲ್ಲದ ಮನೆಯಲ್ಲಿ ಕೌಟುಂಬಿಕ ಜೀವನ ನಿರ್ವಹಣೆ ಕಷ್ಟವಾಗಿತ್ತು. ಇದರಿಂದ ಮೂವರು ಮಹಿಳೆಯರು ಮಾನಸಿಕವಾಗಿ ಕುಗ್ಗಿದ್ದರು ಆದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಪತ್ನಿ ಸಾವು.. 5 ವರ್ಷದ ಕಂದನನ್ನು ಕೊಂದು ತಂದೆ ಆತ್ಮಹತ್ಯೆ!

ABOUT THE AUTHOR

...view details