ಕರ್ನಾಟಕ

karnataka

ETV Bharat / state

24 ಗಂಟೆಯ ಕಳೆಯೋದ್ರೊಳಗೆ ಚಿತ್ರದುರ್ಗದಲ್ಲಿ 'ಅದೇ' ರೀತಿ ಅಪಘಾತ.. ಮೂವರು ಹೆಣ್ಮಕ್ಕಳು ಸಾವು! - ಚಿತ್ರದುರ್ಗ ಅಪರಾಧ ಸುದ್ದಿ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಜೋಡಿ ಶ್ರೀರಂಗಾಪುರ ಬಳಿ ನಿನ್ನೆ ಬೆಳ್ಳಂಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಮತ್ತೊಂದು ಅಪಘಾತ ಅದೇ ರೀತಿ ಸಂಭವಿಸಿದ್ದು, ಮೂವರು ಹೆಣ್ಮಕ್ಕಳು ಸಾವನ್ನಪ್ಪಿದ್ದಾರೆ.

Accident in Chitradurga, People died in road accident at Chitradurga, Chitradurga crime news, Car hit to tree in Chitradurga, ಚಿತ್ರದುರ್ಗದಲ್ಲಿ ಅಪಘಾತ, ಚಿತ್ರದುರ್ಗದಲ್ಲಿ ರಸ್ತೆ ಅಪಘಾತದಲ್ಲಿ ಜನ ಸಾವು, ಚಿತ್ರದುರ್ಗ ಅಪರಾಧ ಸುದ್ದಿ, ಚಿತ್ರದುರ್ಗದಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಕಾರು,
ಮರಕ್ಕೆ ಕಾರು ಡಿಕ್ಕಿ, ಮೂವರು ಹೆಣ್ಮಕ್ಕಳು ಸಾವು

By

Published : Feb 8, 2022, 9:54 AM IST

Updated : Feb 8, 2022, 10:08 AM IST

ಚಿತ್ರದುರ್ಗ:ಶ್ರೀರಂಗಾಪುರ ಬಳಿ ಸೋಮವಾರ ಬೆಳ್ಳಂಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದರು. ಇಂದು ಬೆಳ್ಳಂಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಹೆಣ್ಣುಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಿರಿಯೂರು ತಾಲ್ಲೂಕಿನ ಬೀರೆನಹಳ್ಳಿ ಸಮೀಪ ನಡೆದಿದೆ.

ಮೃತರೆಲ್ಲರೂ ಭದ್ರಾವತಿಯಿಂದ ಬೆಂಗಳೂರಿಗೆ ಮದುವೆಗೆ ಹೋಗುವಾಗ ಈ ಅವಘಡ ಸಂಭವಿಸಿದ್ದು, ಕಾರು ಚಾಲಕನ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಮರಕ್ಕೆ ಕಾರು ಡಿಕ್ಕಿ, ಮೂವರು ಹೆಣ್ಮಕ್ಕಳು ಸಾವು

ಓದಿ:ತಪ್ಪೊಪ್ಪಿಕೊಂಡ ಪಂಜಾಜ್ ಸಿಎಂ ಸಂಬಂಧಿ: ಜಾರಿ ನಿರ್ದೇಶನಾಲಯ ಹೇಳಿಕೆ

ಮೃತರನ್ನು ಸುಧಿಕ್ಷಾ (17), ರೇಣುಕಾದೇವಿ (39) ವಿಶಾಲಾಕ್ಷಿ (70) ಎಂದು ಗುರುತಿಸಲಾಗಿದೆ. ಇನ್ನು 13 ವರ್ಷದ ಪ್ರತಿಕ್ಷಾ ಗಂಭೀರವಾಗಿ ಗಾಯಗೊಂಡಿದ್ದು ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮರಕ್ಕೆ ಕಾರು ಡಿಕ್ಕಿ, ಮೂವರು ಹೆಣ್ಮಕ್ಕಳು ಸಾವು

ವಿಷಯ ತಿಳಿದ ತಕ್ಷಣ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಳೆದ 24 ಗಂಟೆಯೊಳಗೆ ಚಿತ್ರದುರ್ಗದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಒಂದೇ ರೀತಿಯ ಅಪಘಾತ ಸಂಭವಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಓದಿ:ಚಿತ್ರದುರ್ಗದಲ್ಲಿ ಬೆಳ್ಳಂಬೆಳಗ್ಗೆ ಯಮರಾಜನ ಅಟ್ಟಹಾಸ: ತಾಯಿ, ಮಗಳು, ಮೊಮ್ಮಗಳು ಸಾವು!

Last Updated : Feb 8, 2022, 10:08 AM IST

ABOUT THE AUTHOR

...view details