ಚಿತ್ರದುರ್ಗ:ಟ್ಯಾಂಕರ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ಗುಯಾಲಾಳು ಟೋಲ್ ಬಳಿ ಸಂಭವಿಸಿದೆ.
ಟೋಲ್ ಶುಲ್ಕ ನೀಡಲು ನಿಂತಿದ್ದ ಟ್ಯಾಂಕರ್ಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದ್ದು, ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಮೃತಪಟ್ಟವರನ್ನು ಬೆಳಗಾವಿ ಮೂಲದ ರಮೇಶ್ (55), ವಿಶ್ವನಾಥ್ (65) ಮತ್ತು ಸೀಮಾ (45) ಎಂದು ಗುರುತಿಸಲಾಗಿದೆ.