ಚಿತ್ರದುರ್ಗ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಮೂವರಿಗೆ ಸೋಂಕು ತಗುಲಿದೆ.
ಚಿತ್ರದುರ್ಗದಲ್ಲಿ ಇಂದು ಮೂರು ಕೊರೊನಾ ಪಾಸಿಟಿವ್ - Chitradurga corona latest news
ಇಂದು ಚಿತ್ರದುರ್ಗದಲ್ಲಿ ಮೂವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 80 ಕ್ಕೆ ಏರಿಕೆಯಾಗಿದೆ.
Chitradurga
ಜಿಲ್ಲೆಯ ಹೊಳಲ್ಕೆರೆಯ 55 ವರ್ಷದ ಮಹಿಳೆ (ಪಿ-18176), ಚಳ್ಳಕೆರೆಯ 61 ವರ್ಷದ ವೃದ್ಧ (ಪಿ-18177), ಸೇರಿದಂತೆ ಹಿರಿಯೂರಿನ 09 ವರ್ಷದ ಬಾಲಕಿ (ಪಿ-18178) ಸೇರಿ ಒಟ್ಟು ಮೂರು ಜನಕ್ಕೆ ಸೋಂಕು ತಗುಲಿದೆ. ಸೋಂಕಿತರನ್ನು ಚಿತ್ರದುರ್ಗ ನಗರದಲ್ಲಿರುವ ಕೋವಿಡ್ 19 ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನು ಮೂರು ಜನ ರೋಗಿಗಳ ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚಲಾಗುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 80 ಕ್ಕೆ ಏರಿಕೆಯಾಗಿದೆ.