ಚಿತ್ರದುರ್ಗ: ಕಾದಂಬರಿಕಾರ ಬಿ.ಎಲ್.ವೇಣು ಅವರಿಗೆ ಅನಾಮಧೇಯ ಪತ್ರ ಬಂದಿದ್ದು, ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡಿದಕ್ಕೆ ಕ್ಷಮೆ ಕೇಳುವಂತೆ ತಾಕೀತು ಮಾಡಲಾಗಿದೆ. ಸಾವರ್ಕರ್ ಬಗ್ಗೆ ನೀವು ಹಿಯ್ಯಾಳಿಸಿ ಮಾತನಾಡಿದ್ದು ನಿಮಗೆ ಶೋಭೆ ತರಲ್ಲ. ದಯವಿಟ್ಟು ಕ್ಷಮೆ ಕೇಳಿ ಎಂದು ಪತ್ರದಲ್ಲಿ ಸೂಚನೆ ನೀಡಿದ್ದಾರೆ.
ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು 5ನೇ ತರಗತಿ ಪಠ್ಯದಲ್ಲಿ ಹಲವಾರು ವಿಷಯಗಳನ್ನು ತೆಗೆದಿದ್ದಾರೆ. ಬರಗೂರು ಅವರನ್ನು ಬೆಂಬಲಿಸುವ 61 ಸಾಹಿತಿಗಳನ್ನು ಏನು ಮಾಡಬೇಕು?. ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಕಾರ ಗಲ್ಲಿಗೇರಿಸಬೇಕು ಅಥವಾ ಗುಂಡಿಕ್ಕಿ ಹೊಡೆಯಬೇಕು ಎಂದು ಪತ್ರದಲ್ಲಿ ಉಲ್ಲೇಖವಿದೆ. ಸಾಹಿತಿಗಳ ಜತೆ ಮಾಜಿ ಸಿಎಂ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಹೆಚ್ಡಿಕೆ ಹೆಸರನ್ನೂ ಉಲ್ಲೇಖಿಸಲಾಗಿದೆ.