ಚಿತ್ರದುರ್ಗ:ಯೋಗವನ ಬೆಟ್ಟಕ್ಕೆ ತನ್ನನ್ನು ಉತ್ತರಾಧಿಕಾರಿ ಮಾಡದೆ ಮೋಸ ಮಾಡಿದ್ದಾರೆ ಎಂದು ತಿಪ್ಪೇರುದ್ರ ಸ್ವಾಮೀಜಿ ಸಚಿವ ಶ್ರೀರಾಮುಲು ಮುಂದೆ ವಿಷ ಸೇವಿಸಿ ಶನಿವಾರ ಆತ್ಮಹತ್ಯೆಗೆ ಯತ್ನಿಸಿದ್ದರು. ಪೀಠಾಧ್ಯಕ್ಷ ವಿಚಾರಲ್ಲಿ ಮಾಜಿ ಶಾಸಕ ಹಾಗೂ ಇತರರು ಮೋಸ ಮಾಡಿ ಮಠದಿಂದ ಹೊರ ಹಾಕಲು ಯತ್ನಿಸುತ್ತಿದ್ದಾರೆ ಎಂದು ಸ್ವಾಮೀಜಿ ಆರೋಪಿಸಿದ್ದರು.
ಚಿತ್ರದುರ್ಗದ ಯೋಗವನ ಬೆಟ್ಟದ ಉತ್ತರಾಧಿಕಾರಿ ವಿಷಯದಲ್ಲಿ ಮಾಜಿ ಶಾಸಕ ಬಸವರಾಜ್ ಹಾಗೂ ಯೋಗವನ ಬೆಟ್ಟದ ಪೀಠಾಧಿಪತಿ ಬಸವಕುಮಾರ ಶ್ರೀ, ಮಾಟಮಂತ್ರ, ಷಡ್ಯಂತರ ರೂಪಿಸಿ ಮೋಸ ಮಾಡಿದ್ದಾರೆ ಎಂಬ ಆರೋಪ ಹೊತ್ತುಕೊಂಡಿದ್ದಾರೆ. ಆ ಕಾರಣಕ್ಕಾಗಿಯೇ ನಿನ್ನೆ ಸಚಿವ ಶ್ರೀ ರಾಮುಲು ಅವರ ಮುಂದೆ ಸುಜ್ಞಾನ ಮಂಟಪದ ತಿಪ್ಪೇರುದ್ರ ಸ್ವಾಮೀಜಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ನ್ಯಾಯ ನೀಡುವಂತೆ ಶ್ರೀರಾಮುಲು ಅವರ ಬಳಿ ಮನವಿ ನೀಡಲು ಬಂದಿದ್ದ ತಿಪ್ಪೇರುದ್ರಸ್ವಾಮಿ ಏಕಾಏಕಿ ವಿಷ ಕುಡಿದು, ನನಗೆ ಅನ್ಯಾಯವಾಗಿದೆ. ನ್ಯಾಯ ಕೊಡಿಸಿ ಎಂದು ಅಕ್ರೋಶ ಹೊರಹಾಕಿದ್ದರು. ಸ್ವಾಮೀಜಿ ವಿಷ ಸೇವನೆ ಮಾಡುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ಶ್ರೀಗಳನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಕನಕಪುರದ ಯೋಗವನಬೆಟ್ಟದ ಸಿದ್ದಲಿಂಗ ಶ್ರೀಗಳ ಲಿಂಗೈಕ್ಯರಾದ ಬಳಿಕ ಬಸವಕುಮಾರ ಸ್ವಾಮೀಜಿ ಪೀಠಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕನಕಪುರ ಯೋಗವನ ಬೆಟ್ಟದ ಪೀಠಾಧ್ಯಕ್ಷರಾಗಿ ಸ್ಥಾನ ಕೈತಪ್ಪಿದ್ದು, ಅಧಿಕಾರ, ತೋಳ್ಬಲ, ಹಣ ಇದ್ದೋರನ್ನು ಮಾತ್ರ ಪೀಠಾಧ್ಯಕ್ಷರನ್ನಾಗಿ ಮಾಡಲಾಗುತ್ತದೆ. ಎಲ್ಲದಕ್ಕೂ ಮಾಜಿ ಶಾಸಕ ಬಸವರಾಜ್ ಕಾರಣ ಎಂದು ಆರೋಪಿಸಿದ್ದಾರೆ.
ಡೆತ್ನೋಟ್ ಬರೆದ ಸ್ವಾಮೀಜಿ:
ಪೀಠಾಧ್ಯಕ್ಷ ವಿಚಾರವಾಗಿ ಮಾಜಿ ಶಾಸಕ ಹಾಗೂ ಈಗಿರುವ ಬಸವ ಕುಮಾರ ಶ್ರೀಗಳು ಅನ್ಯಾಯ ಮಾಡಿದ್ದಾರೆ. ಅಲ್ಲದೆ ಷಡ್ಯಂತರ ರೂಪಿಸಿ, ನನ್ನನ್ನು ಯೋಗವನದಿಂದ ಓಡಿಸಿದ್ದಾರೆ. ನನಗೆ ನ್ಯಾಯಬೇಕು. ಅನ್ಯಾಯ ಮಾಡಿದವ್ರಿಗೆ ಶಿಕ್ಷೆಯಾಗಬೇಕು ಎಂದು ವಿಷ ಸೇವಿಸಿದ ತಿಪ್ಪೇರುದ್ರಸ್ವಾಮಿ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ.