ಕರ್ನಾಟಕ

karnataka

ETV Bharat / state

ಮಹಿಳೆಗೆ ಚಾಕು ಇರಿದು ಮಾಂಗಲ್ಯ ಸರ ಕಸಿದು ಕಳ್ಳರು ಪರಾರಿ - 45 ಗ್ರಾಂ ಚಿನ್ನದ ಸರ ಕಳ್ಳತನ

ದಂಪತಿಯನ್ನು ರಸ್ತೆಮಧ್ಯೆ ಅಡ್ಡಗಟ್ಟಿ ಮಹಿಳೆಯ ಕೈಗೆ ಚಾಕುವಿನಿಂದ ಇರಿದು, 1.40 ಲಕ್ಷ ರೂ ಬೆಲೆಬಾಳುವ ಮಾಂಗಲ್ಯ ಸರ ಕಸಿದುಕೊಂಡು ಕಳ್ಳರು ಪರಾರಿಯಾಗಿರುವ ಪ್ರಕರಣ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.

thieves stabbed women
ಮಹಿಳೆಗೆ ಚಾಕು ಇರಿತ

By

Published : Oct 3, 2020, 11:36 AM IST

ಚಿತ್ರದುರ್ಗ: ಮಹಿಳೆ ಕೈಗೆ ಚಾಕು ಇರಿದು ಮಾಂಗಲ್ಯ ಸರ ಕಸಿದು ಕಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕರೀಕೆರೆ ಗ್ರಾಮ ಬಳಿ ಬೈಕಿನಲ್ಲಿ ಬಂದ ಇಬ್ಬರು ಖದೀಮರು ಈ ದುಷ್ಕೃತ್ಯ ಎಸಗಿದ್ದು, ಕರೀಕೆರೆ ಗ್ರಾಮದ ನಿವಾಸಿ ವರಲಕ್ಷ್ಮೀ ಕೊರಳಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. 1.40 ಲಕ್ಷ ರೂ ಬೆಲೆಬಾಳುವ 45 ಗ್ರಾಂ ಚಿನ್ನದ ಸರ ಕದ್ದು ಕಳ್ಳರು ಕಾಲ್ಕಿತ್ತಿದ್ದು, ಪತಿ ಶಿವಣ್ಣ ಜತೆ ಬೈಕಲ್ಲಿ ಗ್ರಾಮಕ್ಕೆ ಮರಳುವ ವೇಳೆ‌ ಅಡ್ಡಗಟ್ಟಿ ಈ ಕೃತ್ಯ ಎಸಗಲಾಗಿದೆ.

ಮಹಿಳೆಗೆ ಚಾಕು ಇರಿತ

ಗಾಯಾಳು ವರಲಕ್ಷ್ಮೀಯನ್ನು ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಳ್ಳಕೆರೆ ಪೊಲೀಸ್​ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಕಳ್ಳರಿಗಾಗಿ ಪೋಲಿಸರು ಬಲೆ ಬೀಸಿದ್ದಾರೆ.

ABOUT THE AUTHOR

...view details