ಚಿತ್ರದುರ್ಗ: ಕೊರೊನಾ ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರ ವಿಚಾರದಲ್ಲಿ ಚಿತ್ರದುರ್ಗ ಜಿಲ್ಲಾಡಳಿತ ದಿಟ್ಟ ನಿರ್ಧಾರ ತೆಗೆದುಕೊಳ್ಳುವತ್ತಾ ಹಿಂದೇಟು ಹಾಕುತ್ತಿದೆ. ಸೋಂಕಿನಿಂದ ಸಾವನ್ನಪ್ಪಿದವರನ್ನು ಹೂಳಲು ಪ್ರತ್ಯೇಕ ಜಾಗ ನಿಗದಿ ಪಡಿಸದೆ, ಊರಮಧ್ಯೆ ಇರುವ ಸ್ಮಾಶನದಲ್ಲೇ ಮೃತ ದೇಹಗಳನ್ನು ಹೂಳಲು ಜಿಲ್ಲಾಡಳಿತ ಆದೇಶ ನೀಡಿರುವುದು ಅ ಭಾಗದ ಜನರ ಆಂತಕಕ್ಕೆ ಕಾರಣವಾಗಿದೆ.
ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾಕ್ಕೆ 2 ಎಕರೆ ಜಾಗ : ಆರೋಗ್ಯ ಸಚಿವರು ಭರವಸೆ - no place for burial of the people
ಚಿತ್ರದುರ್ಗ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡಲು ಜಾಗ ನಿಗದಿಪಡಿಸುವ ಮೂಲಕ ಆರೋಗ್ಯ ಸಚಿವ ಶ್ರೀ ರಾಮುಲು ಅವರು ಇದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
![ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾಕ್ಕೆ 2 ಎಕರೆ ಜಾಗ : ಆರೋಗ್ಯ ಸಚಿವರು ಭರವಸೆ 2 ಎಕರೆ ಜಾಗ ಗುರುತಿಸಿದ ಆರೋಗ್ಯ ಸಚಿವರು](https://etvbharatimages.akamaized.net/etvbharat/prod-images/768-512-8104777-27-8104777-1595267952160.jpg)
ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರನ್ನು ಚಿತ್ರದುರ್ಗ ನಗರದ ಜಟ್ ಪಟ್ ನಗರದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಬೇಕೆಂದು ಜಿಲ್ಲಾಡಳಿತ ಆದೇಶ ಮಾಡಿದೆ. ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾದಿಂದ ಬಲಿಯಾದವರನ್ನು ಜಟ್ ಪಟ್ ನಗರದ ರುದ್ರಭೂಮಿಯ ಜನ್ರು ಸಂಚರಿಸುವ ರಸ್ತೆಯ ಎಡಭಾಗದಲ್ಲೇ ಶವಸಂಸ್ಕಾರ ನೆರವೇರಿಸಲಾಗುತ್ತಿದೆ. ಜಿಲ್ಲಾಡಳಿತದ ನಡೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಕೊರೊನಾ ಸೋಂಕಿತರ ಶವಗಳನ್ನು ಜಟ್ ಪಟ್ ನಗರದ ರುದ್ರಭೂಮಿ ಬಳಿಯೇ ಪೊಲೀಸರ ರಕ್ಷಣೆಯಲ್ಲಿ, ಹಲವು ಗೊಂದಲಗಳ ನಡುವೆ ಆರೋಗ್ಯ ಇಲಾಖೆ ಅಂತ್ಯಸಂಸ್ಕಾರ ನೆರವೇರಿಸುತ್ತಿದೆ. ಹೀಗಾಗಿ ಈ ವಿಚಾರ ತಿಳಿದ ಆರೋಗ್ಯ ಸಚಿವ ಶ್ರೀ ರಾಮುಲು ಕೋವಿಡ್ನಿಂದ ಸಾವನ್ನಪ್ಪಿದವರ ಅಂತ್ಯಸಂಸ್ಕಾರದ ಗೊಂದಲಗಳಿಗೆ ತೆರೆ ಎಳೆಯೋ ಪ್ರಯತ್ನ ಮಾಡಿದ್ದೂ, ಶವ ಸಂಸ್ಕಾರಕ್ಕೆ ಎರಡು ಎಕರೆ ಜಾಗ ಗುರುತಿಸಿ ಭೂಮಿ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.