ಚಿತ್ರದುರ್ಗ: ಹಗಲಲ್ಲೇ ಕಳ್ಳರು ಇನೋವಾ ಕಾರಿನ ಗ್ಲಾಸ್ ಒಡೆದು 6 ಲಕ್ಷ ರೂ ದೋಚಿ ಪರಾರಿಯಾಗಿರುವ ಘಟನೆ ನಗರದ ಕಾರ್ಪೋರೇಷನ್ ಬ್ಯಾಂಕ್ ಬಳಿ ನಡೆದಿದೆ.
ಕೋಟೆನಾಡಲ್ಲಿ ಹಾಡುಹಗಲೇ ಕಾರ್ ಗ್ಲಾಸ್ ಒಡೆದು 6 ಲಕ್ಷ ದೋಚಿದ ಖದೀಮರು - ಇನೋವಾ ಕಾರಿನ ಗ್ಲಾಸ್ ಒಡೆದು 6 ಲಕ್ಷ ದೋಚಿದ ಖದೀಮರು
ಚಿತ್ರದುರ್ಗದಲ್ಲಿ ಕಳ್ಳರು ಇನೋವಾ ಕಾರಿನ ಗ್ಲಾಸ್ ಒಡೆದು 6 ಲಕ್ಷ ರೂ ದೋಚಿ ಪರಾರಿಯಾಗಿರುವ ಘಟನೆ ಜರುಗಿದೆ.

ಇನೋವಾ ಕಾರ್
ಇನೋವಾ ಕಾರಿನ ಗ್ಲಾಸ್ ಒಡೆದು 6 ಲಕ್ಷ ದೋಚಿದ ಖದೀಮರು
ಗುತ್ತಿಗೆದಾರ ಪ್ರಕಾಶ್ ಎಂಬುವವರು ಕಾರ್ಪೋರೇಷನ್ ಬ್ಯಾಂಕಿನಿಂದ ಹಣ ಬಿಡಿಸಿಕೊಂಡು ಕಾರಿನಲ್ಲಿಟ್ಟು ಬಳಿಕ ಮತ್ತೆ ಬ್ಯಾಂಕ್ ಒಳಗೆ ತೆರಳಿದಾಗ ಖದೀಮರು ಕಾರಿನ ಗ್ಲಾಸ್ ಒಡೆದು ಈ ಕೃತ್ಯ ಎಸಗಿದ್ದಾರೆ.
ಘಟನೆ ಸಂಬಂಧ ಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ಹಣ ಕಳೆದುಕೊಂಡ ಪ್ರಕಾಶ್ರನ್ನು ಗಮನಿಸಿಯೇ ಕಳ್ಳರು ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.