ಕರ್ನಾಟಕ

karnataka

ETV Bharat / state

ಕೋವಿಡ್​ 2ನೇ ಅಲೆ.. ಚಿತ್ರದುರ್ಗ,ದಾವಣಗೆರೆಯಲ್ಲಿ ಜನಪ್ರತಿನಿಧಿಗಳಿಂದಲೇ ನಿಯಮ ಉಲ್ಲಂಘನೆ - ಕೋವಿಡ್ ನಿಯಮ ಉಲ್ಲಂಘನೆ

ದಾವಣಗೆರೆಯಲ್ಲಿ ರೈಲ್ವೆ ನಿಲ್ದಾಣ ನವೀಕರಣಗೊಂಡಿದೆ. ಇದರ ಉದ್ಘಾಟನೆ ಸಮಾರಂಭದಲ್ಲಿ ಸಂಸದ ಜಿ.ಎಂ ಸಿದ್ದೇಶ್ವರ್ ಜನರನ್ನು ಗುಂಪುಗೂಡಿಸಿಕೊಂಡು, ಸಾಮಾಜಿಕ ಅಂತರವಿಲ್ಲದೆ ಕಾರ್ಯಕ್ರಮ ಉದ್ಘಾಟಿಸಿದರು..‌

ನಿಯಮ ಉಲ್ಲಂಘನೆ
ನಿಯಮ ಉಲ್ಲಂಘನೆ

By

Published : Apr 3, 2021, 9:47 PM IST

ಚಿತ್ರದುರ್ಗ/ದಾವಣಗೆರೆ :ಒಂದೆಡೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ತನ್ನ ತೀವ್ರತೆ ಪಡೆಯುತ್ತಿದೆ. ಇನ್ನೊಂದೆಡೆ ಸರ್ಕಾರಿ ಕಾರ್ಯಕ್ರಮಗಳ ಹೆಸರಿನಲ್ಲಿ ಜನಪ್ರತಿನಿಧಿಗಳೇ ಕೋವಿಡ್​​ ನಿಯಮ ಗಾಳಿಗೆ ತೂರುತ್ತಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿಯಲ್ಲಿ ಬಾಷ್ ಸಂಸ್ಥೆ ಸಿಎಸ್ಆರ್ ಅನುದಾನದಡಿ ನೂತನ ಹೈಟೆಕ್ ಶಾಲೆ ನಿರ್ಮಾಣ ಮಾಡಲಾಗಿದೆ. ಇದರ ಉದ್ಘಾಟನೆ ವೇಳೆ ಕೋವಿಡ್ ನಿಯಮ ಉಲ್ಲಂಘಿಸಲಾಗಿದೆ.

ನೂರಾರು ಜನರು, ವಿದ್ಯಾರ್ಥಿಗಳು ಮಾಸ್ಕ್​, ಸಾಮಾಜಿಕ ಅಂತರ ಗಾಳಿಗೆ ತೂರಿ ಅದ್ದೂರಿ ಸಮಾರಂಭ ಮಾಡಿದ್ದಾರೆ. ಸಂಸದ ಎ.ನಾರಾಯಣಸ್ವಾಮಿ, ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಕಾರ್ಯಕ್ರಮದಲ್ಲಿದ್ದರು.

ಚಿತ್ರದುರ್ಗ,ದಾವಣಗೆರೆಯಲ್ಲಿ ಕೋವಿಡ್​ ನಿಯಮ ಉಲ್ಲಂಘನೆ

ಇನ್ನು, ದಾವಣಗೆರೆ ರೈಲ್ವೆ ನಿಲ್ದಾಣ ನವೀಕರಣ ಗೊಂಡಿದೆ. ಉದ್ಘಾಟನೆ ಸಮಾರಂಭದಲ್ಲಿ ಸಂಸದ ಜಿ ಎಂ ಸಿದ್ದೇಶ್ವರ್ ಜನರನ್ನು ಗುಂಪುಗೂಡಿಸಿಕೊಂಡು, ಸಾಮಾಜಿಕ ಅಂತರವಿಲ್ಲದೆ ಕಾರ್ಯಕ್ರಮ ಉದ್ಘಾಟಿಸಿದರು.‌ ಜನರಿಗೆ ಜಾಗೃತಿ ಮೂಡಿಸುವ ಜನಪ್ರತಿನಿಧಿಗಳೇ ಈ ರೀತಿ ನಿಯಮ ಉಲ್ಲಂಘಿಸಿದರೆ ಹೇಗೆ ಅನ್ನೋ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದೆ.

ಇದನ್ನೂ ಓದಿ..ವಾರಣಾಸಿಗೆ ಬರಲು ನಿಮಗೆ ಸ್ವಾಗತ: ದೀದಿಗೆ ಓಪನ್ ಚಾಲೆಂಜ್​​ ಹಾಕಿದ ನಮೋ

ABOUT THE AUTHOR

...view details